ಇಂಡಿ | ಯುಕೆಪಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಇಂಡಿ : ಯುಕೆಪಿ ಕಚೇರಿ ಮೇಲೆ ಬೆಳಗ್ಗೆ ವಿಜಯಪುರ ಲೋಕಾಯುಕ್ತ ಎಸ್.ಪಿ ಮಹೇಶ ಇವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಅಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಅಭಿತಂತರ ಪ್ರಕಾಶ ಗೆಡಬಂಡಿ ಇವರ ಕುರಿತು ಎಲ್ಲ ಕಾಗದ ಪತ್ರಗಳನ್ನು ಲೋಕಾಯುಕ್ತರು ತಪಾಸಣೆ ನಡೆಸಿದರು.
ಅದರಂತೆ ಅದೇ ವೇಳೆ ಪ್ರಕಾಶ ಗಡಬಂದಿಯವರ ಬೆಂಗಳೂರಿನ ಮಹಾದೇವಪುರ ಬಡಾವಣೆಯಲ್ಲಿರುವ ಮನೆ, ಮತ್ತು ಬಾಲ್ಕಿಯಲ್ಲಿರುವ ಮನೆ ಮತ್ತು ಬಾಲ್ಕಿ ಯಲ್ಲಿರುವ ದೀಪಾಂಕರ ಶಾಲೆ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಪ್ರಕಾಶ ಗೆಡಬಂಡಿಯವರ ಕುರಿತು ಇರುವ ಕಾಗದ ಪತ್ರಗಳನ್ನು ಕಲೆ ಹಾಕಿದ್ದು ಪ್ರಕರಣದ ದಾಳಿ ಮುಂದುವರೆದಿದೆ.
ಲೋಕಾಯುಕ್ತ ಸಿಪಿಐ ನಿಂಗಪ್ಪ ಪೂಜಾರಿ, ಸಿಬ್ಬಂದಿ ಸಿದ್ದರಾಮ ನಾವಿ, ಚೇತನ ಹಿರೇಮಠ, ಚನಗೊಂಡ ಹಳಿಕಾರ ಮತ್ತಿತರಿದ್ದರು.
ಇಂಡಿಯ ಕೃಷ್ಣಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ಲೋಕಾಯುಕ್ತರು ಪ್ರಕಾಶ ಗೆಡಬಂಡಿ ಇವರ ಕಾಗದ ಪರಿಶೀಲನೆ ಮಾಡುತ್ತಿರುವದು.


















