ಬಿಸಿಲ ನಗರಿಯಲ್ಲಿ ಮತ್ತೊಂದು ಬಾಣಂತಿ ಸಾವು..!
ರಾಯಚೂರು : ಜಿಲ್ಲೆಯಲ್ಲಿ ಎರಡು ತಿಂಗಳು ಗತಿಸಿಲ್ಲ ಮತ್ತೊಂದು ಸಾವಿನ ಸೂತಕ.ಬಾಣಂತಿ ಸಾವನ್ನ ತಡಿಯುವಲ್ಲಿ ಆರೋಗ್ಯ ಇಲಾಖೆ ನಿಷ್ಕ್ರಿಯ. ಆರೋಗ್ಯ ಸಚಿವರು ನೋಡಲೇ ಬೇಕಾದ ಸ್ಟೋರಿ ಇದು.
ಸ್ಟೋರಿ ನೋಡುವ ಮುನ್ನ ವೈಸ್ ಆಪ್ ಜನತಾವನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಿ.
ಎಸ್ ರಾಯಚೂರು ಜಿಲ್ಲೆಯ ಮಾನವಿ ತಾಯಿ ಮಗುವಿನ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಸಾವು.
ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮದ ಮಹಿಳೆ, 21 ವಯಸ್ಸಿನ ಚಂದ್ರಿಕಾ ಮೃತ ಬಾಣಂತಿಯಾಗಿದ್ದಾಳೆ.
ಮಾನ್ವಿಯ ತಾಯಿ ಮಗು ಆಸ್ಪತ್ರೆಯಲ್ಲಿ ಫೆ.14ರಂದು ನಡೆದ ಸಹಜ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಫೆ.16 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಆಗಮಿಸಿದ ನಾಲ್ಕು ದಿನಗಳ ಬಳಿಕ ಬಾಣಂತಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಗ್ರಾಮದ ಆರೋಗ್ಯ ಉಪ ಕೇಂದ್ರದಲ್ಲಿ ನರ್ಸ್ ಮಾತ್ರೆ ನೀಡಿದ್ದರು, ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಫೆ.21 ರಂದು ಮಾನ್ವಿಯ ತಾಯಿ ಮಗು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು ಆಗ ಅಲ್ಲಿನ ವೈದ್ಯರು ರಿಮೆ ದಾಖಲಿಸಲು ಶಿಫಾರಸು ಮಾಡಿದ್ದರು. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಬಾಣಂತಿ ಮೃತಪಟ್ಟಿದ್ದಾರೆ.
‘ಹೆರಿಗೆ ಸಂದರ್ಭದಲ್ಲಿ ಉಂಟಾದ ರಕ್ತಸ್ರಾವ ನಿಯಂತ್ರಣಕ್ಕೆ ಇಡಲಾಗಿದ್ದ ಹತ್ತಿ (ಕಾಟನ್) ತೆಗೆಯದೆ ತಾಯಿ ಮಗು ಆಸ್ಪತ್ರೆ ವೈದ್ಯರು ನಿರ್ಲಕ್ಷ ಮಾಡಿದ್ದಾರೆ. ಈ ಬಗ್ಗೆ ರಿಮ್ಸ್ ವೈದ್ಯರು ತಮಗೆ ಮಾಹಿತಿ ನೀಡಿದ್ದಾರೆ, ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ ನಮ್ಮ ಪುತ್ರಿಯ ಸಾವಿಗೆ ಕಾರಣ’ ಎಂದು ಮೃತಳ ತಂದೆ ಫಕೀರಪ್ಪ ಚಾಗಿ ಆರೋಪಿಸಿದರು.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಿ ಎಂದು ಆಕ್ರೋಶ ಹೊರ ಹಾಕಿದ ಬಾಣಂತಿ ಕುಟುಂಬದವರು.


















