ಎಸ್ಪಿ ನಿಂಬರಗಿ ಅವರಿಂದ ಸಂಗನಗೌಡರಿಗೆ ಪ್ರಶಂಸನಾ ಪತ್ರ ವಿತರಣೆ.
ವಿಜಯಪುರದ ಸೈಬರ್‌ಕ್ರೈಂ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾದ ಸಂಗನಗೌಡರಿಗೆ ಪ್ರಶಂಸಾ ಪತ್ರ ವಿತರಣೆ.
ಮುದ್ದೇಬಿಹಾಳ: ತಾಲೂಕಿನ ವನಹಳ್ಳಿ ಗ್ರಾಮದ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಸದ್ಯ ವಿಜಯಪುರದ ಸೈಬರ್‌ಕ್ರೈಂ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿರುವ ಸಂಗನಗೌಡ ಬಿರಾದಾರ( ವನಹಳ್ಳಿ) ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಇನ್‌ವೆಸ್ಟಮೆಂಟ್ ಫ್ರಾಡ್, ಮಾರ್ಕೇಟಿಂಗ್ ಕಂಪನಿಯ ಫ್ರಾಂಚೈಸಿ ಕೊಡಿಸುವುದಾಗಿ, ಮ್ಯಾಟ್ರಿಮೊನಿಯಲ್ ಫ್ರಾಡ್, ಸರ್ಕಾರದ ನಿಗಮದ ಹಣ ದುರ್ಬಳಕೆ ಇತ್ಯಾದಿಗಳ ಹೆಸರಿನಲ್ಲಿ ವಂಚನೆಗೊಳಗಾದವರು ದೂರು ನೀಡಿದ ಮೇರೆಗೆ ದಾಖಲಾಗಿದ್ದ ಒಟ್ಟು ಐದು ಸೈಬರ್ ವಂಚನೆ ಪ್ರಕರಣಗಳನ್ನು ಸೈಬರ್‌ಕ್ರೈಂ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರನ್ನೊಳಗೊಂಡ ತಂಡವು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ, ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿತರ ಬ್ಯಾಂಕ್ ಖಾತೆಗಳಿಂದ ಒಟ್ಟು 1.32 ಕೋಟಿ ಹಣ ಫ್ರೀಜ್ ಮಾಡಿಸಿ, ನ್ಯಾಯಾಲಯದ ಆದೇಶದ ಮೇರೆಗೆ ನೊಂದ ದೂರುದಾರರಿಗೆ ಹಿಂತಿರುಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೀರಿ. ಇನ್ನು ಮುಂದೆಯೂ ಸಹ ನೀವು ನಿಮ್ಮ ಕರ್ತವ್ಯದಲ್ಲಿ ಇದೇ ರೀತಿ ಪ್ರಾಮಾಣಿಕ ಪ್ರಯತ್ನ ಮಾಡಿ ಇಲಾಖೆಗೆ ಗೌರವ ಹೆಚ್ಚಿಸುತ್ತೀರೆಂದು ಆಶಿಸುತ್ತಾ ಈ ಪ್ರಶಂಸನಾ ಪತ್ರವನ್ನು ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಸೈಬರ್‌ಕ್ರೈಂ ಠಾಣೆಯ ಡಿಎಸ್ಪಿ ಕಾಂಬಳೆ, ಸಿಪಿಐ ಯಡಣ್ಣನವರ್, ಠಾಣೆಯ ಸಿಬ್ಬಂದಿ ಪ್ರಶಂಸನಾ ಪತ್ರ ನೀಡುವಾಗ ಸೇರಿದಂತೆ ಉಪಸ್ಥಿತರಿದ್ದರು.