ಆದರ್ಶ ವಿದ್ಯಾಲಯ ಬಿದರಕುಂದಿ ಶಾಲೆಗೆ 6 ನೇ ತರಗತಿಗೆ ಪ್ರವೇಶ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 05 ನೇ ವರೆಗೆ ವಿಸ್ತರಣೆ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: 2025-26 ನೇ ಸಾಲಿಗೆ ಆದರ್ಶ ವಿದ್ಯಾಲಯ ( ಆರ್ ಎಮ್ ಎಸ್ ಎ )ಶಾಲೆಯ ತಾಲೂಕಿನ ಬಿದರಕುಂದಿ ಶಾಲೆಗೆ 6 ನೇ ತರಗತಿಗೆ ಪ್ರವೇಶ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 5 ನೇ ವರಗೆ ವಿಸ್ತರಿಸಲಾಗಿದೆ . ಆಸಕ್ತ ಪಾಲಕರು ತಮ್ಮ ಮಕ್ಕಳ ಅರ್ಜಿಯನ್ನು www.schooleducation.kar.nic.in or www.vidyavahini.karnataka.gov.in ವೆಬ್ ಸೈಟ್ ಬಳಸಿ ಆನ್ ಲೈನ್ ನಲ್ಲಿ ಸಲ್ಲಿಸುವುದು. ವಿವರಗಳನ್ನು ಸರಿಯಾಗಿ ಭರ್ತಿ ಮಾಡುವುದು, ಪರೀಕ್ಷೆಗೆ ಸಂಬಂಧಿಸಿದಂತೆ ಮಾಹಿತಿಯು ತಾವು ಅರ್ಜಿಯಲ್ಲಿ ಸಲ್ಲಿಸಿದ ಮೊಬೈಲ್ ನಂಬರ್ ಗೆ ಸಂದೇಶ ಬರುವುದರಿಂದ ಚಾಲ್ತಿರುವ ಮೊಬೈಲ್ ನಂಬರನ್ನು ನೀಡುವುದು.
ಹೆಚ್ಚಿನ ಮಾಹಿತಿಗಾಗಿ ಅದರ್ಶ ವಿದ್ಯಾಲಯದ ಮುಖ್ಯೊಪಾಧ್ಯಾಯರಾದ ಶ. ಅನೀಲಕುಮಾರ ಜೆ ರಾಠೋಡ ರವರ ಮೋಬೈಲ್ ಸಂಖ್ಯೆ 9945614301ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.


















