ಜಿಲ್ಲಾ ಕ್ರೀಡಾಕೂಟದ ಫೈನಲ್ ಪಂದ್ಯಾವಳಿಯಲ್ಲಿ ತೀರ್ಪುಗಾರರಿಲ್ಲದೆ ಪಂದ್ಯ ಸ್ಥಗಿತ
ಹನೂರು : ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜು ಹನೂರು, ಜೆಎಸ್ಎಸ್ ಪದವಿ ಪೂರ್ವ ಕಾಲೇಜು ರಾಮಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದರು ಆದರೆ ಕ್ರೀಡೆಯ ಅಂತಿಮ ಅಂತದಲ್ಲಿ ಆಯೋಜಕರ ಸಮಯ ಪ್ರಜ್ಞೆಯ ಯಡವಟ್ಟಿನಿಂದ ತೀರ್ಪುಗಾರರು ಇಲ್ಲದೇ ಇರುವ ಕಾರಣ ಪಂದ್ಯ ವನ್ನು ರದ್ದು ಮಾಡಿದ್ದು ಎಷ್ಟರಮಟ್ಟಿಗೆ ಸರಿಯಾಗಿದೆ.
ವಾಲಿಬಾಲ್ ಫೈನಲ್ ಪಂದ್ಯ ಕೊಳ್ಳೇಗಾಲ ಹಾಗೂ
ಚಾಮರಾಜನಗರ ನಡುವೆ ನಡೆಯಬೇಕಿದ್ದ ಪಂದ್ಯ ತೀರ್ಪುಗಾರರಿಲ್ಲದೆ ಆಟವನ್ನು ರದ್ದುಪಡಿಸಿ , ಪಂದ್ಯವನ್ನು ಮರು ದಿನ ನಡೆಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಆದರೆ ವಾಲಿಬಾಲ್ ಹಾಗೂ ಖೊ ಖೋ ಪಂದ್ಯಾವಳಿಗೆ ನಿಯೋಜಿಸಿದ್ದ ತೀರ್ಪುಗಾರರು ಇಲ್ಲದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡುವಲ್ಲಿ ವಿಫಲವಾಯಿತಾ? ಆಯೋಜಕರು ಕ್ರೀಡಾಕೂಟಕ್ಕೆ ಬಂದಂತಹ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡದಿರುವುದು ಶೋಚನೀಯ ಸಂಗತಿಯಾಗಿದೆ. ಇನ್ನು ಮುಂದಾದರೂ ಕ್ರೀಡಾಕೂಟದ ಆಯೋಜಕರು ತಮ್ಮ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸುತ್ತಾರ ಎಂದು ಕಾದು ನೋಡಬೇಕಾಗಿದೆ.
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ