ಲಿಂಗಸೂಗೂರು: ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಗೊಳಿಸಿದ ರಾಯಚೂರು ನ್ಯಾಯಾಧೀಶರ ವಿರುದ್ಧ ವಿವಿಧ ಸಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕಿನ ಮುದಗಲ್ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ನ್ಯಾಯಾಧೀಶರ ವಿರುದ್ಧ ಆಕ್ರೋಶ ಹೊರ ಹಾಕಿದರು. ಇನ್ನು ನ್ಯಾಯಾಧೀಶರು ರಾಷ್ಟ್ರದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅಲ್ದೆ ತಮ್ಮ ವೃತ್ತಿ ಗೌರವಕ್ಕೆ ಅವಮಾನ ಮಾಡದ್ದಾರೆ. ಇವರು ನ್ಯಾಯಾವಾದಿ ಸ್ಥಾನಕ್ಕೆ ಅರ್ಹರಲ್ಲ. ಅಪರಾಧ ಎಂಬ ಗುರುತನ್ನು ನ್ಯಾಯಾಂಗವು ತುರ್ತಾಗಿ ಮಾಡಬೇಕಿದೆ. ನ್ಯಾಯಾಧೀಶರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಎಸ್.ಡಿ.ಪಿ.ಐ, ಮಾದಿಗರ ಮಹಾಸಭಾ, ಕರುನಾಡ ವಿಜಯ ಸೇನೆ, ಭಾರತೀಯ ದಲಿತ ಪ್ಯಾಂಥರ್, ಜೈ ಬೀಮ್ ಯುವ ಘರ್ಜನೆ ಕಾರ್ಯಕರ್ತರು ನಾಡ ಕಾರ್ಯಾಲಯದ ಉಪ ತಹಶಿಲ್ದಾರ ತುಳಜಾರಾಂ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.