ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸೋಣ:ಎಂ ಆರ್ ಮಂಜುನಾಥ್
ಹನೂರು : ಇತಿಹಾಸದಲ್ಲಿ ಹನೂರು ಪಟ್ಟಣ ಪಂಚಾಯತಿ ಜೆ ಡಿಎಸ್ ಚುಕ್ಕಾಣಿ ಹಿಡಿದಿದೆ. ಆದ್ದರಿಂದ ನಮಗೆ ಜವಾಬ್ದಾರಿ ಹೆಚ್ಚಿಗಿದೆ. ಪ್ರತಿ ವಾರ್ಡಿನಲ್ಲೂ ಕುಂದು ಕೊರತೆ ಸಭೆ ಮಾಡುವಂತೆ ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು .
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿಗೃಹದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು ಗಳಿಗೆ ಅಭಿವೃದ್ಧಿಗೆ ಹೊತ್ತು ನೀಡುವಂತೆ ಕಿವಿ ಮಾತು ಹೇಳುತ್ತ ,ಪಟ್ಟಣದಲ್ಲಿ ಉತ್ತಮ ಆಡಳಿತ ನೀಡುವ ದೆಸೆಯಲ್ಲಿ ಜನರು ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಅದರಂತೆ ಮತದಾರರ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಭೆಯನ್ನು ಕರೆಯಬೇಕು, ಮುಖ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಒಗ್ಗಟ್ಟಿನಿಂದ ಅಭಿವೃದ್ಧಿಯ ಕಡೆಗೆ ಸಾಗಬೇಕು. ಪಟ್ಟಣದ ಹಲವು ಸಮಸ್ಯೆಗಳಾದ ಕುಡಿಯುವ ನೀರು ,ಹಕ್ಕುಪತ್ರ, ಚರಂಡಿ ವ್ಯವಸ್ಥೆ, ಲೈಟ್ ಗಳು ರಸ್ತೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು .ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸವನ್ನು ಅಂತ ಅಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ .
ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ನಡೆಯುವ ಎಲ್ಲಾ ಕೆಲಸ ಕಾರ್ಯಗಳು ಪಾರದರ್ಶಕತೆ ಯಿಂದ ಕೂಡಿರಲಿ ಎಂದು ಕಿವಿ ಮಾತು ಹೇಳಿದರು . ಮೊದಲು ನೂತನ ಸಮಿತಿಯು ಅಧಿಕಾರಿಗಳ ಜೊತೆಯಲ್ಲಿ ಸಭೆಮಾಡಿ ಸಮಸ್ಯೆಗಳನ್ನು ಪಟ್ಟಿ ಮಾಡಿ ನಂತರ ಉನ್ನತ ಮಟ್ಟದ ಅಧಿಕಾರಿಗಳ ಸಹಕಾರದಿಂದ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಕರೆ ಕೊಟ್ಟರು . ಪಂಚಾಯಿತಿಯಲ್ಲಿರುವ ಸಿಸಿ ಟಿವಿಯ ಲಿಂಕ್ ಸಹಿತ ನಮಗೆ ನೀಡಿ ಅದನ್ನು ವೀಕ್ಷಿಸುವುದರ ಜೊತೆಗೆ ಪಾರದರ್ಶಕತೆಯನ್ನು ತರುವ ಜವಾಬ್ದಾರಿ ನನ್ನದು . ಕಛೇರಿಯಲ್ಲಿ ಹಿರಿಯ ನಾಗರಿಕರಿಗೆ ಆಸನದ ವ್ಯವಸ್ಥೆಯನ್ನು ಮಾಡಬೇಕಾಗಿದೆ , ಪ್ರತಿಯೊಬ್ಬರು ತಮ್ಮ ವಾರ್ಡಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಅಧಿಕಾರಿಗಳಿಗೆ ನೀಡಬೇಕು . ಪಂಚಾಯತಿಯ ವಾಟರ್ ಮ್ಯಾನ್ ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರುಗಳು ಬಂದಿದ್ದು, ಇನ್ನು ಮುಂದೆ ಅದನ್ನು ಸರಿಪಡಿಸಿಕೊಂಡು ಕಾರ್ಯವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಅಶೋಕ್ ಕುಮಾರ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮುಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಗಳಾದ ಮಹೇಶ್, ಮಹೇಶ್ ನಾಯ್ಕ, ಪವಿತ್ರ, ರೂಪ, ಮಂಜುಳಾ ಹಾಗೂ ಮುಖಂಡರುಗಳು ಹಾಜರಿದ್ದರು.
ವರದಿ : ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ


















