ಮಸ್ಕಿ: ಸಾರ್ವಜನಿಕ ಸ್ಥಳದ ಪಾಳುಬಿದ್ದ ಮನೆಯೊಂದರಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಅಕ್ರಮ ಮಧ್ಯವನ್ನು ಪೊಲೀಸರು ವಶಪಡಿಕೊಂಡ ಘಟನೆ ನಡೆದಿದೆ.
ರಾಯಚೂರ ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದ ಸಾರ್ವಜನಿಕ ಸ್ಥಳವಾದ ಆಲಂಭಾಷ ದರ್ಗಾ ಹತ್ತಿರ ವಿರುವ ಹಾಳು ಬಿದ್ದ ಮನೆಯಲ್ಲಿ ಅನಧಿಕೃತವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ
ಮಾಡಲಾಗುತ್ತಿತ್ತು.
ವಿಷಯ ತಿಳಿದ ಬಳಗಾನೂರು ಪಿಎಸ್ ಐ ಪ್ರಕಾಶ್ ರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 90,048 ರೂ ಬೆಲೆ ಬಾಳುವ 138 ಲೀಟರ್ ಮಧ್ಯವನ್ನು ವಶಪಡಿಕೊಂಡು ಆರೋಪಿಯಾದ ಸುರೇಶ್ ತಂ/ ಅಮರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.