ಅಫಜಲಪುರ: ತಾಲೂಕಿನ ಶಿವೂರ ಗ್ರಾಮದ ಪ್ರಮುಖರೊಂದಿಗೆ ಮುಂಬರುವ ಚುನಾವಣೆಯ ಸಭೆ ನಡೆಸಲಾಯಿತು.
ಅಫಜಲಪುರ ಅಭಿವೃದ್ಧಿಗೆ ಹಾಕಿಕೊಂಡಿರುವ 11 ಪ್ರಣಾಳಿಕೆಗಳನ್ನು ಜನರಿಗೆ ಮನವರಿಕೆ ಮಾಡಿಸಿ, ಕುಮಾರಣ್ಣನವರ ಪಂಚರತ್ನ ಯೋಜನೆಗಳಿಗೆ ಸಹಕಾರ ನೀಡಿ ಆಶೀರ್ವದಿಸಿ ಎಂದು ಅಪಜಲಪುರ ಅಭಿವೃದ್ಧಿಯ ಕನಸು ಹೊಂದಿರುವ ಯುವ ಹೋರಾಟಗಾರ ಶಿವಕುಮಾರ ನಾಟಿಕಾರ ರವರು ನಾವು ಇಷ್ಟು ದಿನ ಎಲ್ಲ ನಾಯಕರಿಗೂ ಅವಕಾಶ ಕೊಟ್ಟು ನೋಡಿದ್ದೇವೆ. ಆದರೆ ಈ ಬಾರಿ ಹಣ ಹೆಂಡಕ್ಕೆ ಮಾರುಹೋಗದೆ ಬಡ ರೈತನ ಮಗ ಶಿವಕುಮಾರ ನಾಟಿಕರ ರವರಿಗೆ ನಾವು ನೀವು ಎಲ್ಲರೂ ಒಂದಾಗಿ ಈ ಬಾರಿ ಒಂದು ಅವಕಾಶ ಕೊಟ್ಟು ನೋಡೋಣ. ಇವರು ತಾಲೂಕನ್ನ ಸಂಪೂರ್ಣವಾಗಿ ಅಭಿವೃದ್ಧಿ ಮಾಡುತ್ತಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಜಮೀಲ್ ಗೌಂಡಿ ಹೇಳಿದರು.
ನಂತರ ಮಾತನಾಡಿದ ಅಪಜಲಪುರ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಶಿವಕುಮಾರ ನಾಟಿಕಾರ ರವರು ಮಾತನಾಡಿ ರಾಜ್ಯದಲ್ಲಿ ಈ ಬಾರಿ ಕುಮಾರಣ್ಣನವರ ಸರ್ಕಾರ ಬರಲಿದೆ. ಕುಮಾರಣ್ಣನವರು ಬಡವರಿಗಾಗಿ ರೈತರಿಗಾಗಿ ಬಹಳಷ್ಟು ಯೋಜನೆಗಳನ್ನ ತಂದಿದ್ದಾರೆ. ಆ ಯೋಜನೆಗಳನ್ನ ಎಲ್ಲರಿಗೂ ತಲುಪಬೇಕಾದರೆ ಕುಮಾರಣ್ಣನವರು ಮುಂದಿನ ಮುಖ್ಯಮಂತ್ರಿ ಆಗಬೇಕು. ಗ್ರಾಮಸ್ಥರು ಈ ಬಾರಿ ಹೊಸ ಭರೆಸೆಯ ಹೊಸ ಮುಖದ ಭರವಸೆಯಲ್ಲಿದ್ದೇವೆ ಎಂದು ಒಮ್ಮತ ತೋರಿದ್ದಾರೆ. ಜನರು ಈ ಬಾರಿ ಹೊಸ ಮುಖಕ್ಕೆ ಅಫಜಲಪುರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಲಿದ್ದಾರೆ. ತಾಲೂಕಿನ ಜನತೆ ಸಂಪೂರ್ಣವಾಗಿ ಹೊಸ ಮುಖಕ್ಕೆ ಮನ್ನಣೆ ಕೊಡಲಿದ್ದಾರೆ ಹೀಗಾಗಿ ಈ ಬಾರಿ ನನಗೆ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಜನರು ಅವಕಾಶ ಕೊಡಲಿದ್ದಾರೆ. ಜನರು ಯಾವುದೇ ಕಾರಣಕ್ಕೂ ಹಣ ಹೆಂಡಕ್ಕೆ ಮಾರುಹೋಗಬೇಡಿ ನಿಮ್ಮ ಮತ ಬಹಳ ಅತ್ಯಮೂಲ್ಯವಾದದ್ದು ಎಂದಿಗೂ ಮಾರಿಕೊಳ್ಳಬೇಡಿ ಎಂದು ಹೇಳಿ ನನ್ನ 11 ಪ್ರಣಾಳಿಕೆಗಳು
ಮಣ್ಣು ,ನೀರು ,ನೀರಾವರಿ, ಕೃಷಿ ಮತ್ತು ರೈತರ ಸುಧಾರಣೆ, ಶಿಕ್ಷಣ ಕ್ಷೇತ್ರದ ಸುಧಾರಣೆ,
ಉದ್ಯೋಗ ಸೃಷ್ಟಿ, “ಸ್ವಾಭಿಮಾನದ ಸಂಕೇತ ಪ್ರತಿಮೆ ನಿರ್ಮಾಣ ಹೋರಾಟದ ಧ್ವನಿಗಳಾಗಿದ್ದ ವಿಠ್ಠಲ್ ಹೇರೂರು ಮತ್ತು ಚೋಳಪ್ಪ ಗೌಡ ಪಾಟೀಲರ 21 ಅಡಿಗಳ ಜೋಡಿ ಪ್ರತಿಮೆಗಳನ್ನು ಸ್ವಾಭಿಮಾನದ ಸಂಕೇತ ಪ್ರತಿಮೆಗಳೆಂದು ಅಪಜಲಪುರ ಪಟ್ಟಣದಲ್ಲಿ ಸ್ಥಾಪನೆ ಮಾಡುತ್ತೇನೆ. ಪರತಹಬಾದ್ ಹೋಬಳಿಯಲ್ಲಿ ಸರ್ವ ಸಮಾಜದ ನಾಯಕ ಜಯಕುಮಾರ್ ಕೋಣಿನ್ ಅವರ ಪ್ರತಿಮೆ ಸ್ಥಾಪನೆ ಮಾಡುತ್ತೇನೆ.
ಇನ್ನು ಆರೋಗ್ಯ ಸುಧಾರಣೆ, ಕಡಕೋಳ ಮಡಿವಾಳಪ್ಪ ಪ್ರಾಧಿಕಾರ ರಚನೆ ಮತ್ತು ಸಾಹಿತ್ಯ ಕ್ಷೇತ್ರದ ಕುರಿತು, ಅಫಜಲಪುರ ಪಟ್ಟಣದ ಅಭಿವೃದ್ಧಿ, ಅಫಜಲಪುರ ಪಟ್ಟಣದಲ್ಲಿ ವಿವಿಧ ಸಮಾಜಗಳ ಸಮುದಾಯ ಭವನ ನಿರ್ಮಾಣ, ದೇವಲಗಣಗಾಪುರದ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿ, ಜನ ಹಿತಕ್ಕಾಗಿ ಜನಸೇವೆ, ಇವುಗಳು ನನ್ನ ಅಭಿವೃದ್ಧಿಯ ಪ್ರಣಾಳಿಕೆಗಳು. ನಾನು ಶಾಸಕನಾಗಿ ಕೆಲವೇ ದಿನಗಳಲ್ಲಿ ಇವುಗಳನ್ನ ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಶಿವೂರ ಗ್ರಾಮದ ಮತ್ತು ಸಮಸ್ತ ಅಪಜಲಪುರ ತಾಲೂಕಿನ ಜನದೇವರ ಸಾಕ್ಷಿಯಾಗಿ ಹೇಳುತ್ತೆನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಾಜಕುಮಾರ್ ಉಕ್ಕಲಿ, ಮಂಜುನಾಥ ನಾಯಕೋಡಿ, ಶರಣು ಜೈನಾಪುರ, ಲಕ್ಕಣ್ಣ ಜಮಾದಾರ, ಹುಸೇನ್ ಮುಲ್ಲಾ, ಅಪ್ಪಾಶ ನರಗೋದಿ, ಇನ್ನುಸ ಮುಲ್ಲಾ, ಉಮರೇಲಿ ಚೌಧರಿ, ಹಾಗೂ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಭಾಗಿಯಾಗಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಅಫಜಲಪುರ.