ಕೇವಲ ಪುಸ್ತಕ ಜ್ಞಾನಕ್ಕೆ ಸೀಮಿತರಾಗಬಾರದು, ಸಮಾಜದಲ್ಲಿನ ವಿಚಾರಗಳು ಅರಿಯಿದ್ದರೆ, ಜೀವನ ಕಷ್ಟ ಸಾಧ್ಯ..! ಬಿಜೆಪಿ ಮುಖಂಡ ಕಾಸುಗೌಡ
ಇಂಡಿ: ಇಂದಿನ ಯುವ ಜನತೆ ಕೇವಲ ಪುಸ್ತಕ ಜ್ಞಾನಕ್ಕೆ ಸೀಮಿತರಾಗುತ್ತಿದ್ದಾರೆ. ಸಮಾಜದಲ್ಲಿನ ವಿಚಾರಗಳನ್ನು ಅರಿಯದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.
ಅವರು ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸಿ.ವಿ. ರಾಮನ್ ಪದವಿಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ತಮ್ಮ ಮಾತಿನುದ್ದಕ್ಕೂ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯವನ್ನು ಉತ್ತಮವಾಗಿ ವಿವರಿಸಿದರು.
ಶಿಕ್ಷಕ ಕೆ.ಎ. ತೆಲಸಂಗ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಾವು ಕಲಿಯುವ ಪ್ರತೀ ಸಂದರ್ಭದಲ್ಲಿಯೂ ತಂದೆ ತಾಯಿಯ ಶ್ರಮದ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಪಾಲಕರು ಕಷ್ಟದ ಪರಿಸ್ಥಿತಿಯಲ್ಲಿ ನಿಮಗೆ ಉತ್ತಮ ಶಿಕ್ಷಣ ನೀಡುವ ಹಂಬಲ ಹೊಂದಿ ನಿಮ್ಮನ್ನು ಉತ್ತಮ ಸಂಸ್ಥೆಗಳಲ್ಲಿ ಕಲಿಸುತ್ತಾರೆ. ಅವುಗಳನ್ನೆಲ್ಲ ಸ್ಮರಿಸಿಕೊಂಡು ವಿದ್ಯಾಭ್ಯಾಸ ಮಾಡಿದಾಗ ವಿದ್ಯಾರ್ಥಿ ಜೀವನ ಉನ್ನತ ಸ್ಥಾನಕ್ಕೇರಲು ಸಾಧಯವಾಗುತ್ತದೆ ಎಂದರು.
ಅತಿಥಿ ಶಿಕ್ಷಕ ಆಂಜನೇಯ ಸ್ವಾಮಿ ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಾಗಬೇಕೆಂದು ಮಕ್ಕಳನ್ನು ತಮ್ಮ ಮಾತಿನ ಮೂಲಕ ವಿವರಿಸಿದರು.ಸಂಸ್ಥೆಯ ಸಂಸ್ಥಾಪಕ ಶಿವಾನಂದ್ ಕಾಮಗೊಂಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ವರ್ಧಮಾನ್ ಮಹಾವೀರ್, ಅನಂತ್ ಜೈನ್, ಎಸ್.ಎಸ್.ತೆಲಸಂಗ, ಪ್ರಸನ್ನ ನಾಡಗೌಡ, ಸನ್ಮತಿ ಹಳ್ಳಿ, ಗಣೇಶ್ ಮಹೇಂದ್ರಕರ್ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗದ ವಿದ್ಯಾರ್ಥಿಗಳಾದ ಸಾಕ್ಷಿ ಸಪಲಿ, ಐಶ್ವರ್ಯ ವಾಲಿಕರ್, ಕಾವೇರಿ ಬರಡೋಲ ಅವರನ್ನು ಸತ್ಕರಿಸಲಾಯಿತು.
ಇಂಡಿ: ಪಟ್ಟಣದ ಸಿ.ವಿ. ರಾಮನ್ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗದ ವಿದ್ಯಾರ್ಥಿಗಳಾದ ಸಾಕ್ಷಿ ಸಪಲಿ, ಐಶ್ವರ್ಯ ವಾಲಿಕರ್, ಕಾವೇರಿ ಬರಡೋಲ ಅವರನ್ನು ಸತ್ಕರಿಸಲಾಯಿತು.