ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ
ಅಫಜಲಪುರ: ಅಫಜಲಪುರ ಘಟಕದಿಂದ ಬಡದಾಳ ಮಾರ್ಗವಾಗಿ ಅರ್ಜುಣಗಿ ಗ್ರಾಮಕ್ಕೆ ಬರುತ್ತಿದ್ದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಈ ಗಂಭೀರ ಸಮಸ್ಯೆಯನ್ನು ಮನಗಂಡು, ಅಫಜಲಪುರ ಬಸ್ ನಿಲ್ದಾಣದಿಂದ ದುಧನಿ ಮಾರ್ಗವಾಗಿ ಅರ್ಜುಣಗಿ ಗ್ರಾಮದವರೆಗೆ ಹೊಸ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಅರುಣಕುಮಾರ ಪಾಟೀಲರು ಹಾಗೂ ಘಟಕ ವ್ಯವಸ್ಥಾಪಕರಾದ ಎ.ಎ. ಬೋವಿ ಅವರು ನೀಡಿದ ಭರವಸೆಯಂತೆ, ಇದೀಗ ಬಸ್ ಸೇವೆ ಪುನರಾರಂಭಗೊಂಡಿದ್ದು,
ಗ್ರಾಮಸ್ಥರಲ್ಲಿ ಸಂತೋಷ ಮೂಡಿಸಿದೆ.
ಇಂದು ಅರ್ಜುಣಗಿ ಗ್ರಾಮದಲ್ಲಿ ಮೊದಲ ಬಾರಿಗೆ ಬಂದ ಬಸ್‌ಗೆ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಬಸ್ ಸಿಬ್ಬಂದಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಗ್ರಾಮದ ಸಮಸ್ಯೆಗೆ ಸಕಾರಾತ್ಮಕ ಸ್ಪಂದನೆ ದೊರೆತಿರುವುದು ಸಂತಸದ ವಿಷಯವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗುರುಶಾಂತ್ ಬಿರಾದಾರ್, ಬಾಬು ಮಾಲಿ ಪಾಟೀಲ್, ಮಹದೇವಪ್ಪ ಕೋಣೆ, ಸುದೀಪ್ ಹಂಗರಗಿ, ಈರಣ್ಣ ಹಂಗಾರಗಿ, ರಹೇಮಾನ ಮನಿಯಾರ, ಶಶಿಕಾಂತ ಚವಾಣ, ಶಂಕರ್ ಚವಾಣ್, ತುಕಾರಾಮ ಚವಾಣ, ಗೋವಿಂದ ರಾಠೋಡ, ಕೆಕೆಆರ್‌ಟಿಸಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


















