ಮಾಜಿ ಸಚಿವ ಪಟ್ಟಣಶೆಟ್ಟಿ ಜನ್ಮದಿನದ ಪ್ರಯುಕ್ತ ಶಾಂತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಇಂಡಿ: ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಶನಿವಾರ ಪಟ್ಟಣದ ಆರಾಧ್ಯ ದೈವ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ ಪಟ್ಟಣಶೆಟ್ಟಿ ಅಭಿಮಾನಿಗಳು ಹಾಗೂ ಹಿತೈಷಿಗಳು ವಿಶೇಷ ಪೂಜೆ ಸಲ್ಲಿಸಿ ಸಿಹಿಹಂಚಿ ಜನ್ಮದಿನ ಆಚರಿಸಿದರು.
ಈ ಸಂದರ್ಭದಲ್ಲಿ ಶಾಂತು ಕಂಬಾರ, ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಸೋಮು ನಿಂಬರಗಿಮಠ, ಶಿವು ಬಗಲಿ, ಮಲ್ಲು ವಾಲಿಕಾರ, ಮಲ್ಲಿಕಾರ್ಜುನ ಬಿರಾದಾರ, ವಜ್ರ ಕಾಂತ ಕುಡಿಗನೂರ, ರಾಮಸಿಂಗ ಕನ್ನೊಳ್ಳಿ, ಅಶೋಕ ಅಕಲಾದಿ, ಶ್ರೀಕಾಂತ ಬಡಿಗೇರ, ಪ್ರಶಾಂತ ಲಾಳಸಂಗಿ, ಪಿ.ಸಿ. ಪೂಜಾರಿ, ಬಾಬುರಾವ್ ಶಿಂಧೆ, ಪ್ರಶಾಂತ ಗೌಳಿ, ಮಂಜುನಾಥ ದೇವರ ಸೇರಿದಂತೆ ಇನ್ನಿತರರು ಇದ್ದರು.