ವಕ್ಸ್ ಆಸ್ತಿ ಗುಮ್ಮ ವಿರುದ್ಧ ಉಗ್ರ ಪ್ರತಿಭಟನೆ ಎಚ್ಚರಿಕೆ : ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ
ಇಂಡಿ: ಅನ್ನದಾತರ ಪಹಣಿಯಲ್ಲಿ ವಕ್ಸ್ ಆಸ್ತಿ ಎಂದು ಅಧಿಕಾರಿಗಳು ಮತ್ತು ಸರಕಾರ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದನ್ನು ಕೂಡಲೆ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಮಾಡಲಾಗುವದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಕೋಡಹಳ್ಳಿ ಚಂದ್ರಶೇಖರ ಬಣದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್.ಬಿ. ಕೆಂಬೋಗಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ತಲೆತಲಾಂತರದಿಂದ ಉಳುಮೆ ಮಾಡುತ್ತ ಬಂದಿರುವ ಕೃಷಿ ಭೂಮಿ ಮೇಲೆ ‘ವಕ್ಸ್ ಆಸ್ತಿ’ ಅನ್ನದಾತರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕೆಲವು ಹಳ್ಳಿಯಲ್ಲಿ ಕೃಷಿ ಭೂಮಿ ರೈತರ ಜಮೀನುಗಳಿಗೆ ವಕ್ಸ್ ಮಂಡಳಿ ನೋಟಿಸ್ ಮತ್ತು ಪಹಣ ಯಲ್ಲಿ ನಮೂದಿಸಿದ್ದು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ವಿವಾದದ ವ್ಯಾಪಕತೆ, ಗಂಭೀರತೆಯನ್ನು ಅರಿಯಲು ರಾಜ್ಯ ರೈತ ಸಂಘ ಅಧ್ಯಯನ ಸಮಿತಿ ರಚನೆಗೆ ಮುಂದಾಗಿದೆ. ತಲೆಮಾರುಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದ ಜಮೀನಿನ ಪಹಣ ಯಲ್ಲಿ ವಕ್ಸ್ ದಾಖಲಾಗಿ ಮಂಡಳಿ ನೋಟಿಸ್ ನೀಡಿರುವುದು ರೈತರಿಗೆ ಕೆಂಗಣ ್ಣಗೆ ಗುರಿಯಾಗಿದ್ದಾರೆ. ಭೂ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸುವುದಕ್ಕೆ ವ್ಯಾಪಕ ಹೋರಾಟ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯಾಧಕ್ಷ ಕೋಡಿಹಳ್ಳಿ ಚಂದ್ರಶೇಖರ ಈ ಸಂಬAಧ ಮುಂದಿನ ಹೆಜ್ಜೆ ನಿರ್ಧರಿಸಲು ತಂಡವನ್ನು ನೇಮಿಸಲು ನಿರ್ಧರಿಸಿದ್ದಾರೆ. ರೈತರಿಗೆ ನೋಟಿಸ್ ಬಂದಿದ್ದರೆ ತಕ್ಷಣ ನಮಗೆ (೯೭೩೧೫೪೯೯೯೭) ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದ್ದಾರೆ.