• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಲು ಜಿಲ್ಲಾ ಶುಲ್ಕ ಪರಿಶೀಲನಾ ಸಮಿತಿ ರಚನೆಗೆ ಎಎಪಿ ಆಗ್ರಹ

      @Voiceofajanta.in

      June 9, 2026
      0
      ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಲು ಜಿಲ್ಲಾ ಶುಲ್ಕ ಪರಿಶೀಲನಾ ಸಮಿತಿ ರಚನೆಗೆ ಎಎಪಿ ಆಗ್ರಹ
      0
      SHARES
      43
      VIEWS
      Share on FacebookShare on TwitterShare on whatsappShare on telegramShare on Mail

      ವಿಜಯಪುರ: ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಲು ಜಿಲ್ಲಾ ಶುಲ್ಕ ಪರಿಶೀಲನಾ ಸಮಿತಿ ರಚನೆಗೆ ಎಎಪಿ ಆಗ್ರಹ

      ವಿಜಯಪುರ, ಜೂನ್ 9: ಜಿಲ್ಲೆಯ ಖಾಸಗಿ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.15ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡುತ್ತಿರುವುದನ್ನು ಖಂಡಿಸಿ, ಆಮ್ ಆದ್ಮಿ ಪಾರ್ಟಿ (ಎಎಪಿ) ವಿಜಯಪುರ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

      ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭೋಗೇಶ್ ಸೋಲಾಪುರ್, ಜಿಲ್ಲೆಯ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳು ಈಗಾಗಲೇ ಬೆಲೆ ಏರಿಕೆಯ ಹೊರೆ ಹೊತ್ತಿದ್ದು, ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಹೆಚ್ಚಳವು ಪೋಷಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರವನ್ನು ಹೊರಿಸುತ್ತಿದೆ ಎಂದು ಆರೋಪಿಸಿದರು.

      ಕರ್ನಾಟಕ ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ಖಾಸಗಿ ಅನುದಾನರಹಿತ ಶಾಲೆಗಳು ಗರಿಷ್ಠ ಶೇ.5 ರವರೆಗೆ ಮಾತ್ರ ಶುಲ್ಕ ಹೆಚ್ಚಳ ಮಾಡಬಹುದಾಗಿದೆ. ಆದರೆ ಹಲವು ಶಾಲೆಗಳು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡುತ್ತಿದ್ದು, ಇದು ನಿಯಮಬಾಹಿರವಾಗಿದೆ ಎಂದು ಅವರು ತಿಳಿಸಿದರು.

      ಹೆಚ್ಚಿನ ಶಾಲೆಗಳು ಶುಲ್ಕ ಹೆಚ್ಚಳಕ್ಕೆ ಅನುಗುಣವಾಗಿ ಮೂಲಸೌಕರ್ಯ, ಶಿಕ್ಷಕರ ಗುಣಮಟ್ಟ ಅಥವಾ ಶಿಕ್ಷಣದ ಮಟ್ಟದಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಮಾಡಿಲ್ಲ. ಅತಿಯಾದ ಶುಲ್ಕ ಹೆಚ್ಚಳವು ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆಯನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

      ಈ ಹಿನ್ನೆಲೆಯಲ್ಲಿ ಎಎಪಿ ಜಿಲ್ಲಾಡಳಿತದ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದೆ. ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶೇ.5ಕ್ಕಿಂತ ಹೆಚ್ಚಿನ ಶುಲ್ಕ ಹೆಚ್ಚಳವನ್ನು ನಿಷೇಧಿಸಬೇಕು, ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಪೋಷಕರಿಗೆ ಹಣ ಮರುಪಾವತಿಸಬೇಕು, ಜಿಲ್ಲಾ ಮಟ್ಟದಲ್ಲಿ “ಜಿಲ್ಲಾ ಶುಲ್ಕ ಪರಿಶೀಲನಾ ಸಮಿತಿ” ರಚಿಸಿ ಶಾಲೆಗಳ ಶುಲ್ಕ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.

      ಇದಲ್ಲದೆ, ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ದಂಡಾತ್ಮಕ ಕ್ರಮ ಹಾಗೂ ಅಗತ್ಯವಿದ್ದಲ್ಲಿ ಮಾನ್ಯತೆ ರದ್ದುಪಡಿಸುವಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಿ, ಪೋಷಕರಿಗೆ ಉತ್ತಮ ಮತ್ತು ಕೈಗೆಟುಕುವ ಶಿಕ್ಷಣದ ಪರ್ಯಾಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

      ವಿದ್ಯಾರ್ಥಿಗಳು ಮತ್ತು ಪೋಷಕರ ಹಿತಾಸಕ್ತಿಯನ್ನು ಕಾಪಾಡಲು ಜಿಲ್ಲಾಡಳಿತವು ತ್ವರಿತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಭೋಗೇಶ್ ಸೋಲಾಪುರ್ ಆಗ್ರಹಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಸಂಜು ಶೆಟಗಾರ, ಯುವ ಮುಖಂಡ ಪ್ರಕಾಶ್ ಸಬರದ ಹಾಗೂ ನಗರ ಜಂಟಿ ಕಾರ್ಯದರ್ಶಿ ಜ್ಯೋತಿಭಾ ಹೊನ್ನಕಲಸೆ ಉಪಸ್ಥಿತರಿದ್ದರು.

      Tags: #indi / vijayapur#Public News#State News#Today News#Vijayapura: AAP demands formation of district fee review committee to curb fee hike in private schools#Voice Of Janata#Voiceofjanata.in#ವಿಜಯಪುರ: ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಲು ಜಿಲ್ಲಾ ಶುಲ್ಕ ಪರಿಶೀಲನಾ ಸಮಿತಿ ರಚನೆಗೆ ಎಎಪಿ ಆಗ್ರಹ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0

      ಕೆಲಸಕ್ಕಾಗಿ ಜಾಬ ಕಾರ್ಡು ಪಡೆಯೋದು ನಿಮ್ಮ ಹಕ್ಕು

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0

      ಕೆಲಸಕ್ಕಾಗಿ ಜಾಬ ಕಾರ್ಡು ಪಡೆಯೋದು ನಿಮ್ಮ ಹಕ್ಕು

      August 20, 2026
      ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

      ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

      August 20, 2026
      ಡಿ ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ ಸಂತೋಷ ಬಂಡೆ

      ಡಿ ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ ಸಂತೋಷ ಬಂಡೆ

      August 20, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.