ಅಬ್ಬಬ್ಬಾ..! ಎಂತಹ ಟ್ರಾಫಿಕ್, ಎಲ್ಲಿ ಗೊತ್ತಾ..?
ಅಫಜಲಪುರ : ತಾಲ್ಲೂಕಿನ ಸುಕ್ಷೇತ್ರ ಘತ್ತರಗಿ ಗ್ರಾಮದಲ್ಲಿ ಟ್ರಾಫಿಕೊ ಟ್ರಾಫಿಕ್..! ಏಕೆ ಗೊತ್ತಾ..?
ರವಿವಾರ ನಾಗರ ಅಮವಾಸ್ಯೆ ನಿಮತ್ಯ ಸಹಸ್ರಾರು ಸಂಖ್ಯೆಯಲ್ಲಿ ಸುಕ್ಷೇತ್ರ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಈ ಸಂದರ್ಭದಲ್ಲಿ ಘತ್ತರಗಿ ಮೊರಟಗಿ ರಸ್ತೆಯ, ಭೀಮಾನದಿ ಬ್ರಿಡ್ಜ್ ಮೇಲೆ ವಾಹನಗಳ ಅಡ್ಡಾದಿಡ್ಡಿ ಚಲಾವಣೆಯಿಂದ ದೊಡ್ಡ ಟ್ರಾಫಿಕ್ ಎದುರಾಗಿದ್ದು,ಟ್ರಾಫಿಕ್ ಕ್ಲೀಯರ್ ಮಾಡಲು ಪೋಲಿಸರು ಹರಸಾಹಸ ಪಟ್ಟರು. ಕನಿಷ್ಠ 1 ಘಂಟೆಗಿಂತ್ತಲೂ ಹೆಚ್ಚಿನ ಸಮಯ ಟ್ರಾಫಿಕ್ ಎದುರಾಗಿದ್ದು, ಪಾದಚಾರಿಗಳು ಭಕ್ತಾಧಿಗಳು ಬಹಳ ಸಮಸ್ಯೆ ಅನುಭವಿಸುವಂತಾಗಿದೆ. ಈಗ ಬಗ್ಗೆ ಅಧಿಕಾರಿಗಳು ಮುಂಜಾಗ್ರತಾ ವಹಿಸಬೇಕಾಗಿತ್ತು. ಆದರೂ ಏಕೋ ಈ ಬಗ್ಗೆ ಕಾಳಜಿವಹಿಸಿಲ್ಲ ಎಂದು ಭಕ್ತಾದಿ , ಹಾಗೂ ನ್ಯಾಯವಾದಿ ಎಸ್ ಬಿ ಕೆಂಬೋಗಿ ಹೇಳಿದರು. ಇನ್ನೂ ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡರು.



















