ಇಂಡಿ: ಎಚ್ಐವಿ ಮತ್ತು ಏಡ್ಸ್ ಪ್ರಮುಖವಾಗಿ ಹರಡಲು ಅಸುರಕ್ಷಿತ ಲೈಂಗಿಕ ಸಂಪರ್ಕ, ಅಸುರಕ್ಷಿತ ಸೂಜಿ ಮತ್ತು ಸಿರಂಜಿಗಳ ಬಳಕೆಯಿಂದ. ಅಸುರಕ್ಷಿತ ರಕ್ತ ಪಡೆಯುವುದರಿಂದ ವೈರಸ್ ಹರಡುತ್ತದೆ ಎಂದು ಮುಖ್ಯ ವೈಧ್ಯಧಿಕಾರಿ ಆರ್.ಟಿ.ಕೊಳೇಕರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಇಂಡಿ ಪಟ್ಟಣದ ತಾಲ್ಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಆಯೋಜನೆಗೊಳಿಸಿರುವ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸೀಮಂತ ಕಾರ್ಯಕ್ರಮವನ್ನು
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಹಾಗೂ ತಾಲೂಕ ಆರೋಗ್ಯ ಇಲಾಖೆ ಮತ್ತು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇವನೂರ
ಸಹಯೋಗದೊಂದಿಗೆ ಜರಗಿತು.
ಈ ವೇಳೆ ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವಿಕೆಯ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕ ಆರೋಗ್ಯಧಿಕಾರಿ ಡಾ ಅರ್ಚನಾ ಕುಲಕರ್ಣಿ ಮಾತನಾಡಿ ಎಚ್.ಐ.ವಿ ಮುಕ್ತ ಸಮಾಜಕ್ಕಾಗಿ ತಾಯಿಯಿಂದ ಮಗುವಿಗೆ ವೈರಸ್ ಬರದಂತೆ ತಡೆಗಟ್ಟಲು ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಉಚಿತ ಹೆಚ್ಐವಿ ತಪಾಸಣೆ, ಆಪ್ತಸಮಾಲೋಚನೆ ಸೌಲಭ್ಯ ಪಡೆಯರಿ. ಏಡ್ಸ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಬೇಕೆಂದು ಹೆಳಿದರು.
ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ ಧೂಮಗೊಂಡ, ಡಾ.ಪ್ರೀತಿ ಕೊಳೇಕರ, ಡಾ. ರಮೇಶ ರಾಠೋಡ, ಮೇಲ್ವಿಚಾರಕರು ಪೂಜಾರ, ಅತನೂರ, ಆಪ್ತ ಸಮಾಲೋಚಕರು, ಆಯೋಜಕರು ಶೀಲವಂತ, ಸವಿತ, ವಿಜಯ ಲಕ್ಷ್ಮಿ, ಪ್ರದೀಪ್ ಆಶಾ ಕಾರ್ಯಕರ್ತೆಯರು ಗರ್ಭಿಣಿ ತಾಯಂದಿರು ಉಪಸ್ಥಿತರಿದ್ದರು.