ಓಟ್ ಚೋರಿ ಅಂತಾರೆ ವಯನಾಡಿನಲ್ಲಿ ರಾಹುಲ್ ಗಾಂಧಿ ಹೇಗೆ ಗೆದ್ದು ಬಂದರು
ವಿಜಯಪುರ: ದಲ್ಲಿ ಸಂಸದ ಗೋವಿಂದ್ ಕಾರಜೋಳ ಮಾದ್ಯಮಗೋಷ್ಟಿ ಯಲ್ಲಿ ಹೇಳಿಕೆ
ಭಾರತದ ಮುಖ್ಯ ಚುನಾವಣಾ ಅಧಿಕಾರಿ ಜ್ಞಾನೇಂದ್ರ ಕುಮಾರ ವಿರುದ್ದ ಕಾಂಗ್ರೆಸ್ ಶಡ್ಯಂತ್ರ ಮಾಡುತ್ತಿದೆ.
ನಕಲಿ ಗಾಂಧಿ ಕುಟುಂಬ ಶಡ್ಯಂತ್ರ ಮಾಡುತ್ತಿದ್ದಾರೆ.
ಈ ದೇಶ, ಸೂರ್ಯ ಚಂದ್ರ ಇರುವವರೆಗೂ ಅವರ ಕೈಯಲ್ಲೇ ದೇಶ ಇರಬೇಕು ಎಂದು ಕೊಂಡಿದ್ದರು.
ಆದರೆ ಗಾಂಧಿ ಕುಟುಂಬ ನಾಶ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ.
ದೇಶದಲ್ಲಿ ಅರಾಜಕತೆ ಉಂಟು ಮಾಡಬೇಕು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಕುಟುಂಬ ಪ್ರಯತ್ನ ಮಾಡುತ್ತಿದೆ.
ದೇಶದಲ್ಲಿ ಕರೋನಾ ಬಂದಾಗ ಪ್ರಪಂಚದ ಯಾವುದೇ ದೇಶದಲ್ಲಿ ವ್ಯಾಕ್ಸಿನ್ ತಯಾರಿ ಮಾಡುವ ಮುಂಚೆ ಭಾರತ ದೇಶದಲ್ಲಿ ತಯಾರಿ ಆಗಿತ್ತು.
100 ಬಡ ರಾಷ್ಟ್ರಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ವ್ಯಾಕ್ಸಿನ್ ಕೊಡುವ ಕೆಲಸ ನರೇಂದ್ರ ಮೋದಿ ಅವರು ಮಾಡಿದರು.
ಆಗ ವ್ಯಾಕ್ಸಿನ ತಗೆದು ಕೊಳ್ಳಬೇಡಿ ಪ್ರಾಣಕ್ಕೆ ಅಪಾಯ ಇದೆ ಎಂದು ಜನರಿಗೆ ದಾರಿ ತಪ್ಪಿಸಿದ್ದು ಕಾಂಗ್ರೆಸ್.
ಬಳಿಕ ಸೋನಿಯಾ ಗಾಂಧಿ, ಖರ್ಗೆ ಅವರು ಸಹಿತ ಹೋಗಿ ವ್ಯಾಕ್ಸಿನ್ ತಗೊಂಡರು.
ದೇಶದಲ್ಲಿ ಹೆಚ್ಚು ಜನ ಸತ್ತು ದೇಶಕ್ಕೆ ಕೆಟ್ಟ ಹೆಸರು ತರಬೇಕು ಎಂಬುದು ಕಾಂಗ್ರೆಸ್ ನವರ ಉದ್ದೇಶವಾಗಿತ್ತು.
ಓಟ್ ಚೋರಿ ಅಂತಾರೆ ವಯನಾಡಿನಲ್ಲಿ ರಾಹುಲ್ ಗಾಂಧಿ ಹೇಗೆ ಗೆದ್ದು ಬಂದರು.
ನಿಮ್ಮ ಸಹೋದರಿ ಹೇಗೆ ಗೆದ್ದು ಬಂದರು.
ದೊಂಬಿ ಎಬ್ಬಿಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಕಪ್ಪು ಚುಕ್ಕಿ ಇಡುವ ಕೆಲಸ ರಾಹುಲ್ ಗಾಂಧಿ ಮಾಡುತ್ತಿದ್ದಾರೆ.
ಎಸ್ ಐ ಆರ್ ಸರಿ ಇಲ್ಲ ಎಂಬುವ ಕಾಂಗ್ರೆಸ್ ನಾಯಕರ ಹೇಗೆ ಗೆದ್ದಿರಿ.
ಕೆಲಸಕ್ಕೆ ಬಾರದ ಅರವಿಂದ ಕೆಜ್ರಿವಾಲ್ ಅವರ ಜೊತೆ ಕೂಡಿದ್ದಾರೆ.
ಕೇರಳದಲ್ಲಿ ಸರ್ಕಾರ ಬರಲು ಅದು ಹೇಗೆ ಸಾಧ್ಯವಾಯಿತು.
ಮೋದಿ ಅವರನ್ನು ಎದುರಿಸುವ ಶಕ್ತಿ ಕಾಂಗ್ರೆಸ್ ಗೆ ಇಲ್ಲ ಹೀಗಾಗಿ ನಾಗರಿಕ ದಂಗೆ ಎಬ್ಬಿಸುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ 1994 ರಿಂದ ಬ್ರಿಟಿಷ್ ಪೌರತ್ವ ಹೊಂದಿದ್ದೀರಾ ಎಂಬ ಆರೋಪ ಇದೆ
ಅದರ ಬಗ್ಗೆ ರಾಹುಲ್ ಗಾಂಧಿ ಅವರು ಸ್ಪಷ್ಟ ಪಡಿಸಬೇಕು
ರಾಹುಲ್ ಗಾಂಧಿ ಪರವಾಗಿ ಖರ್ಗೆ ಅವರು ಬೇಕಾದರೆ ಹೇಳಲಿ.
ಜ್ಞಾನೇಂದ್ರ ಕುಮಾರ ಒಬ್ಬ ದಲಿತ ಐಐಎಸ್ ಅಧಿಕಾರಿ.
ಬಾಬಾ ಸಾಹೇಬ್ ಅವರು ತೀರಿಕೊಂಡಾಗ ಅವರ ಶವ ಸಂಸ್ಕಾರಕ್ಕೂ ಬರಲಿಲ್ಲ ಕಾಂಗ್ರೆಸ್ ನಾಯಕರು.
ಜಯಪ್ರಕಾಶ್ ಹೆಗಡೆ ಕಾಂತರಾಜ್ ವರದಿ, ಮಧುಸೂಧನ ವರದಿ ತಯಾರು ಮಾಡಿದಿರಿ ಯಾರಿಗಾದರೂ ನ್ಯಾಯ ಕೊಟ್ಟರಾ.
ಹಾವನೂರ ವರದಿ ಒಪ್ಪಿಕೊಂಡರು.
ದೇವರಾಜ್ ಅರಸು ಅವರು ಹಿಂದುಳಿದ, ದಲಿತರ ಪರವಾದ ನಾಯಕರು.
ಇವರದ್ದು ಬರೀ ಮೋಸದಾಟ.
ರಾಜ್ಯದಲ್ಲಿ 52 ಸಾವಿರ ಕೋಟಿ ದಲಿತರ ಹಣ ದುರ್ಬಳಕೆ ಆಗಿದೆ, ಅದರ ಬಗ್ಗೆ ಮಾತಾನಾಡಿ.
ಪೌರ ಕಾರ್ಮಿಕರ ಮಕ್ಕಳಿಗೂ ಒಳ ಮೀಸಲಾತಿ ಕೊಡಬೇಕು.
ಸಿದ್ದರಾಮಯ್ಯ ನವರು ಹಿಂದೆ ಮೋಸ ಮಾಡಿದರು.
ದಲಿತರಿಗೆ ಹಾಗೂ ಹಿಂದುಳಿದವರಿಗೆ ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ.
*ಎಸ್ ಐ ಆರ್ ಪರಿಶೀಲನೆ ವಿಚಾರ*
ನಾನು ಕಾರಜೋಳ ಗ್ರಾಮದವನು, ನನ್ನ ಮತದಾನ ಅಲ್ಲಿಯೂ ಇತ್ತು ಇಲ್ಲೂ ಇತ್ತು ಚುನಾವಣೆ ಪೂರ್ವದಲ್ಲಿ.
ಎಸ್ ಐ ಆರ್ ಮೂಲಕ ಅವನ್ನು ತಗೆಯುವ ಕೆಲಸ ಮಾಡುತ್ತಾರೆ.
ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರು, ಬಾಬು ಜಗ ಜೀವನರಾಮ್ ಅವರಿಗೆ ಅವಮಾನ ಮಾಡಿದರು.
ಜ್ಞಾನೇಂದ್ರ ಕುಮಾರ ದಲಿತ ಎಂಬ ಕಾರಣಕ್ಕೆ ಅವರ ಬಗ್ಗೆ ವಿರೋಧ ಮಾಡುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ.
ಜ್ಞಾನೇಂದ್ರಕುಮಾರ ಅವರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ.
ರಾಹುಲ್ ಗಾಂಧಿ ಅವರಿಗೆ ಬ್ರಿಟಿಷ್ ಪೌರತ್ವ ಹೊಂದಿರುವ ಕಾರಣ ಅವರಿಗೆ ಭೀತಿ ಕಾಡುತ್ತಿದೆ.
*ಕೆಪಿಸಿಸಿ ವತಿಯಿಂದ ಜ್ಞಾನೇಂದ್ರ ಕುಮಾರ ಕೆಳಗಿಳಸಿಬೇಕು ಎಂಬ ಹೋರಾಟ ಮಾಡಲು ಮುಂದಾದ ವಿಚಾರ*
ಕಾಂಗ್ರೆಸ್ ನವರಿಗೆ ದಲಿತರಿಗೆ ಹಾಗೂ ಮುಸ್ಲಿಂ ಮರಿಗೆ ಸಹಿಸಿಕೊಳ್ಳಲು ಆಗಲ್ಲ.
ಹೀಗಾಗಿ ಅವರು ಹೋರಾಟ ಮಾಡಲು ಮುಂದಾಗಿದ್ದಾರೆ.
ಈ ದೇಶದಲ್ಲಿ ಒಬ್ಬ ಮುಖ್ಯ ಚುನಾವಣಾ ಅಧಿಕಾರಿ ಆಗಿದ್ದಕ್ಕೆ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದ ಸಂಸದ ಗೋವಿಂದ ಕಾರಜೋಳ.
*ರಾಜ್ಯದಲ್ಲಿ ಬರಗಾಲ ವಿಚಾರ*
ಮುಂಗಾರು ಹಂಗಾಮಿನಲ್ಲಿ ರೈತರ ಬೆಳೆ ಹಾನಿ ಆದ ಕಾರಣ ಅವರ ಸಾಲ ಮನ್ನಾ ಮಾಡಬೇಕು.
ಉದ್ಯೋಗ ಖಾತ್ರೆ ಯೋಜನೆಯ ಮೂಲಕ ಹಳ್ಳಿಗಳಲ್ಲಿ ಉದ್ಯೋಗ ಕೊಡಬೇಕು
ಗೋ ಶಾಲೆಗಳನ್ನು ಪ್ರಾರಂಭ ಮಾಡಬೇಕು.
ಈಗ ಒಂದು ಮಳೆ ಉಳಿದಿದೆ, ಬಂದರೆ ಬಿತ್ತನೆ ಇರದಿದ್ದರೆ ಮುಂಗಾರು ಹಾಗೂ ಹಿಂಗಾರಿ ಸಂಪೂರ್ಣ ಹಾನಿ.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಸರ್ಕಾರ ನೋಡಿ ಕೊಳ್ಳಬೇಕು ಎಂದ ಸಂಸದ ಗೋವಿಂದ ಕಾರಜೋಳ.



















