ಲಂಡನ್: ಬ್ರಿಟನ್ ನ ಲಂಡನ್ ವಿಶ್ವ ವಿದ್ಯಾನಿಲಯದಲ್ಲಿ ಕಲಿಯುತ್ತಿದ್ದ 19 ವರ್ಷದ ಭಾರತ ಮೂಲದ ಬ್ರಿಟನ್ ಪ್ರಜೆಯನ್ನು ಆಕೆಯ ಪ್ರಿಯಕರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾರಾಕಾಸ್ತ್ರಗಳಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಲಾಗಿದೆ. ಮೃತ ಪಟ್ಟ ವಿದ್ಯಾರ್ಥಿನಿಯನ್ನು ಸಬಿತಾ ಥನ್ವಾನಿ ಎಂದು ಗುರುತಿಸಲಾಗಿದೆ. ಸೆಂಟ್ರಲ್ ಲಂಡನ್ ನಲ್ಲಿರುವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟುನಿಷೀಯಾ ಮೂಲದ ಮಹೇರ್ ಮರೂಫ್(22) ಎಂಬಾತನನ್ನು ಬಂಧಿಸಲಾಗಿದೆ.