ಇಂಡಿ :ಸತತ ಪರಿಶ್ರಮ ಹಾಗೂ ಆತ್ಮಸ್ಥೈರ್ಯದಿಂದ ಬದುಕಿನಲ್ಲಿ ಸಾಧನೆಗೈಯ್ಯಲು ಸಾಧ್ಯವಾಗುತ್ತದೆ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಸೋಮವಾರ ತಾಲ್ಲೂಕು ಅಡಳಿತ ಸೌಧದ ಉಪವಿಭಾಗ ಕಛೇರಿಯಲ್ಲಿ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ಹೆಚ್ಚಿಸಿದ ಸಾಯಿ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ
ರಕ್ಷಿತಾ ಪಿ ಕೊಡಹೊನ್ನ ವಿಧ್ಯಾರ್ಥಿನಿಯ ಸಾಧನೆಗೆ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು.
ಸಾಧನೆಗೆ ಬಡತನ, ಸಿರಿತನ ಎಂಬುವುದು ಮುಖ್ಯವಲ್ಲ. ಅದು ಸೋಮಾರಿಯ ಪಲಾಯನ ಮಾತುಗಳು. ಆದರೆ ಸಾಧಿಸುವ ವ್ಯಕ್ತಿಗೆ ಅದು ಯಾವುದು ಕಾಣದೆ ನಿರಂತರ ಪ್ರಯತ್ನ, ಶ್ರಮ ಸಾಧಿಸಬೇಕಂಬ ಛಲ ಮನಸ್ಸಲ್ಲಿ ದೃಡವಾಗಿದ್ದರೆ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಅಕ್ಷತಾ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸತತ ಓದಿನಿಂದ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಉತ್ತಮ ಸಾಧನೆಗೈದ ನೀವು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣ ಪ್ರಭಾರಿ ಅಧಿಕಾರಿ ಎಸ್ ಆರ್ ನಡಗಡ್ಡಿ, ಸಾಯಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಕಲಘಟಗಿ, ವಿಧ್ಯಾರ್ಥಿನಿಯ ತಂದೆ,ತಾಯಿ ಪಿ ಜೆ ಕೊಡಹೊನ್ನ ಉಪಸ್ಥಿತರಿದ್ದರು.