ಶೀಘ್ರವೇ 19 ಸಾವಿರ ಶಿಕ್ಷಕರ ನೇಮಕ: ಸಚಿವ
Voiceofjanata DESK NEWS : ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಅಭಾವ ಎದ್ದು, ಶೀಘ್ರವೇ ರಾಜ್ಯದಲ್ಲಿ 19.000 ಶಿಕ್ಷಕರ ನೇಮಕ ಮಾಡಲಾ ಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತ ನಾಡಿ, ಸರಕಾರಿ ಶಾಲೆಗಳಲ್ಲಿ ಕೆಲ మలాశయ గోళ అభావ ವಿದ್ದು, ಹಂತ ಹಂತವಾಗಿ ಇದನ್ನು ಬಗೆಹರಿಸಲಾಗುವುದು. ರಾಜ್ಯ ದಲ್ಲಿ ಒಳ ಮೀಸ ಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಯು ವರದಿ ನೀಡಿದ ಬಳಿಕ 19 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ
ಶಾಲೆಗಳಿಗೆ 5000 ಶಿಕ್ಷಕರು. ಉಳಿದ ಭಾಗದಲ್ಲಿ 5000 ಸೇರಿ ಒಟ್ಟು 10 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊ ಳ್ಳುವುದಾಗಿ ಈಗಾಗಲೇ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದರ ಜತೆಗೆ ಇನ್ನೂ ಒಂಬತ್ತು ಹುದ್ದೆಗಳು ಸೇರಿ 19 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರ ಜನ ಗಣತಿಯ ಜತೆ ಜಾತಿ ಗಣತಿಯನ್ನು ಮಾಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಜಾತಿ ಗಣತಿ ನಡೆಸಲು ಬಿಜೆಪಿ ಸರಕಾರದ ಈ ನಿರ್ಧಾರವು ನಮ್ಮ ನಾಯಕ ರಾಹುಲ್ ಗಾಂಧಿಯವರ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಖ್ಯಮಂತ್ರಿ
ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶಿವಕುಮಾರ್ ಮತ್ತು ಎಲ್ಲ ಹಿರಿಯ ಕಾಂಗ್ರೆಸ್ ನಾಯಕರ ಅವಿರತ ಪ್ರತಿಪಾದನೆಯಿಂದಾಗಿ ಅಂತಿಮವಾಗಿ 11 ವರ್ಷಗಳ ಬಳಿಕ ಈ ನಿರ್ಣಾಯಕ ವಿಷಯ ಮುನ್ನೆಲೆಗೆ ಬಂದಿದೆ. ಈ ಗಣತಿಯು ದುರ್ಬಲ ವರ್ಗಗಳ ಸಬಲೀಕರಣ ಹಾಗೂ ವಿವಿಧ ಜಾತಿಗಳು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಪರಿಶೀಲಿಸಿ, ವ್ಯವಸ್ಥಿತವಾಗಿ ಅಸಮಾನತೆಗಳನ್ನು ಪರಿಹರಿಸಲು ಜಾತಿ ಜನಗಣತಿ ಮುಖ್ಯ. ಆಗ ಮಾತ್ರ ನಾವೆಲ್ಲರೂ ದುರ್ಬಲರನ್ನು ಮೇಲೆತ್ತುವ ಮತ್ತು ನಿಜವಾಗಿಯೂ ಸಮಾನತೆಯ ಸಮಾಜವನ್ನು ಸೃಷ್ಟಿಸುವ ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಾಧ್ಯವಾಗುವುದು ಎಂದರು.



















