ಇಂಡಿ : ಚಂದನವನದಲ್ಲಿ ಅರಳುತ್ತಿರುವ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ, ಗೌರವಿಸಿ, ಬೆಂಬಲಿಸಿ ಬೆಳೆಸಬೇಕು ಎಂದು ಪತ್ರಕರ್ತ ಉಮೇಶ ಬಳಬಟ್ಟಿ ಹೇಳಿದರು. ಪಟ್ಟಣದ ಅಕ್ಕ ಮಹಾದೇವಿ ಸಹಕಾರಿ ಸೌಹಾರ್ದ ಪತ್ತಿನ ಸಭಾ ಕಾರ್ಯಾಲಯದಲ್ಲಿ ನಮ್ಮೂರಿನ ಯುವಚಿತ್ರ ನಟ ಪಂಚಿ (ಪಂಚಾಕ್ಷರಿ) ಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮಾತಾನಾಡಿದರು.
ಕಲೆ ಕಲೆಗಾರನ ಸ್ವತ್ತು. ಆದರೆ ಆ ಕಲೆಗೆ ಸೂಕ್ತ ವೇದಿಕೆ ಸಿಗದೇ ಎಷ್ಟೋ ಕಲಾವಿದರು ಎಲೆ ಮರೆ ಕಾಯಿಯಂತೆಯಾಗಿದ್ದಾರೆ. ಆದರೆ ಇತ್ತೀಚೆಗೆ ಚಂದನವನದಲ್ಲಿ ನಮ್ಮೂರಿನ ಯುವಕನೊರ್ವ ಪಂಚಿ (ಪಂಚಾಕ್ಷರಿ) ಕನ್ನಡ ಚಲನಚಿತ್ರದ ನಾಯಕ ನಟನಾಗಿ ಹೊರಹೊಮ್ಮಿ ಕಾಣಿಸಿಕೊಂಡಿದ್ದು ಇಡೀ ಉತ್ತರ ಕರ್ನಾಟಕವೇ ಸಂತಸ ಪಡುವಂತಾಗಿದೆ. ನಮ್ಮ ಭಾಗದಲ್ಲಿ ಕಲೆಗಾರನಿಗೆ ಕೊರತೆಯಿಲ್ಲ. ಆದರೆ ಕಲೆಗಾರನ ಮೇಲೆ ಬೇಳಕು ಚಲ್ಲುವ ಮತ್ತು ಸೂಕ್ತ ವೇದಿಕೆ ನೀಡದ ಸ್ಪರ್ಧಾತ್ಮಕ ಯುಗದಲ್ಲಿ ಇದ್ದೆವೆ. ಏನೆ ಇದ್ದರೂ ಸಮಸ್ಯಗಳನ್ನ ಪರಿಗಣನೆಗೆ ತೆಗೆದುಕೊಳ್ಳದೇ ನಿಶ್ಚಲ ಮನಸ್ಸಿನಿಂದ ಪ್ರಾಮಾಣಿಕವಾಗಿ ನಿಂತು ಕೊಂಡರೆ ಯಶಸ್ವಿಯ ವಿಜಯಲಕ್ಷ್ಮಿ ಒಲೆಯುತ್ತಾಳೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಯಕ ನಟ ಪಂಚಿ (ಪಂಚಾಕ್ಷರಿ) ಮಾತಾನಾಡಿ, ಸಮಸ್ಯೆ ಅಂತಾ ಕೂತರೆ ಏನು ಮಾಡಲು ಸಾಧ್ಯವಿಲ್ಲ. ನಮ್ಮ ಉದ್ದೇಶ ಮತ್ತು ಗುರಿ ಸ್ವಷ್ಟವಾಗಿ ಇರಬೇಕು ಎಂದರು. ಇವತ್ತು ನಮ್ಮ ಭಾಗದ ಜನ ನನಗೆ ಸತ್ಕಾರ ಸಮಾರಂಭ ಮಾಡಿ, ಪ್ರೊತ್ಸಾಹ ಕೊಡುತ್ತಿದ್ದಾರೆ ಎಂದು ಹೇಳಿದರು. ಜನರ ಪ್ರೀತಿ ವಿಸ್ವಾಸಕ್ಕೆ, ಇನ್ನೂ ಹೆಚ್ಚು ಕೆಲಸ ಮಾಡಲು ಆತ್ಮವಿಶ್ವಾಸ ಹೆಚ್ಚಾಗಿದೆ. ಪ್ರೇಕ್ಷಕ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸುತ್ತೆನೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಸುಹಾಸಿನಿ ವಸ್ತ್ರದ, ಶ್ರೀಶೈಲ ಮುಳಜಿ, ಅಕ್ಕ ಮಹಾದೇವಿ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷ ಯಲಗೊಂಡ ಬೇವನೂರ, ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಶಿವಾನಂದ ಮಠಪತಿ, ವಿಠ್ಠಲ ಪಟ್ಟಣ, ಸಿದ್ದಾರ್ಥ ಅರಳಿ, ಚಂದ್ರಾಮ ಮೇಡೆದಾರ, ಬ್ಯಾಂಕ್ ಸಿಬ್ಬಂದಿ ಅಶೋಕ ಬಳಬಟ್ಟಿ, ಶ್ರೀಕಾಂತ್ ಗಡಗಲಿ, ಸಚಿನ್ ಉಪಸ್ಥಿತರು.