ರೂಗಿ ಗ್ರಾಮ ಪಂಚಾಯತ್ ನೂತನ ಸಾರಥಿ..!
ಇಂಡಿ : ತಾಲ್ಲೂಕಿನ ಹಿರೇರೂಗಿ ಗ್ರಾಮ ಪಂಚಾಯತ್ ಎರಡನೇ ಅವಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನಕ ಹಿಂದುಳಿದ “ಅ” ವರ್ಗ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸೋಮವ್ವ ಯಶವಂತ ಹೋಸಮನಿ ಮತ್ತು ಶಾಂತಾಬಾಯಿ ಜಗದೇವ ಬಾರಸಾಕಳೆ ಸ್ಪರ್ಧಿಸಿದ್ದರು. ಒಂದು ಮತದ ಅಂತರದಿಂದ ಸೋಮವ್ವ ಯಶವಂತ ಹೋಸಮನಿ ಗೆಲವು ಸಾಧಿಸಿದರು. ಒಟ್ಟು 23 ಸದಸ್ಯರ ಬಲವಿದ್ದು ಸೋಮವ್ವ ಯಶವಂತ ಹೋಸಮನಿ 12 ಮತಗಳು ಹಾಗೂ ಶಾಂತಾಬಾಯಿ ಜಗದೇವ ಬಾರಸಾಕಳೆ 11 ಮತಗಳು ಪಡೆದು ಒಂದು ಮತದ ಅಂತರದಿಂದ ಪರಾಭವಗೊಂಡರು. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಂಬವ್ವ ಚನ್ನಪ್ಪ ಕೊಟಗೊಂಡ 14 ಮತಗಳು ಪಡೆದು ಜಯಶಾಲಿಯಾದ್ರೆ, ಪ್ರತಿಸ್ಪರ್ಧಿ ಭೀಮರಾಯ ಬಸಣ್ಣ ಜೇವೂರ 9 ಮತಗಳು ಪಡೆದು ಪರಾಭವಗೊಂಡರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾಗಿ ಹೆಸ್ಕಾಂ ಸಹಾಯಕ ನಿರ್ವಾಹಕ ಅಭಿಯಂತರ ಎಸ್ ಆರ್ ಮೆಂಡೆಗಾರ ಹಾಗೂ ಪಿಡಿಒ ಬಸವರಾಜ ಬಬಲಾದ ಉಪಸ್ಥಿತರಿದ್ದರು.