VOJ ನ್ಯೂಸ್ ಡೆಸ್ಕ್: ಇಲ್ಲೊಬ್ಬ ವೃದ್ದ ವ್ಯಕ್ತಿ ತನ್ನ ಸ್ವಂತ ಮಗನಂತೆಯೇ ಈ ಪ್ರಾಣಿಯನ್ನು ಪ್ರೀತಿಯಿಂದ ಸಾಕಿದ್ದ. ಆದರೆ ಆ ಮೂಕ ಪ್ರಾಣಿ ಇದ್ದಕ್ಕಿದಂತೆ ಅನಾರೋಗ್ಯದಿಂದ ಸಾವಿಗೀಡಾಗಿತ್ತು. ಇದೀಗ ಆ ಪ್ರಾಣಿಯ ನೆನಪಿಗಾಗಿ ದೇವಾಲಯವನ್ನೇ ನಿರ್ಮಿಸಿ, ದಿನಾಲು ನೈವೇದ್ಯ ಅರ್ಪಿಸುತ್ತಿದ್ದಾರೆ.
ಹೌದು ತಮಿಳುನಾಡಿನಲ್ಲಿ ತಾನು ಸಾಕಿದ ಪ್ರೀತಿಯ ನಾಯಿಯ ಸ್ಮರಣಾರ್ಥವಾಗಿ 82 ವರ್ಷದ ವಯೋವೃದ್ದರೊಬ್ಬರು ತಮ್ಮ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸಿದ ಘಟನೆ ತಮಿಳುನಾಡಿನ ಶಿವಗಂಗೆಯಲ್ಲಿ ನಡೆದಿದೆ. ಲ್ಯಾಬ್ರಡರ್ ಜಾತಿಗೆ ಸೇರಿದ ಶ್ವಾನವು ಸುಮಾರು 11 ವರ್ಷಗಳ ಕಾಲ ಈ ವೃದ್ಧನ ಜೊತೆಯೇ ಇತ್ತು. ಕಳೆದ ವರ್ಷ ಜನವರಿ ತಿಂಗಳಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದೆ. ಹೀಗಾಗಿ ಪ್ರೀತಿಯ ಶ್ವಾನ ಟಾಮ್ನ ಸ್ಮರಣಾರ್ಥವಾಗಿ 80 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಅಮೃತ ಶಿಲೆಯಲ್ಲಿ ಶ್ವಾನದ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಮನ ಮದುರೈನ ಬ್ರಾಹ್ಮಣ ಕುರಿಚಿಯಲ್ಲಿರುವ ಜಮೀನಿನಲ್ಲಿ ಶ್ವಾನದ ಹೆಸರಿನಲ್ಲಿ ದೇವಾಲಯ ನಿರ್ಮಿಸಲಾಗಿದೆ. ಪ್ರತಿನಿತ್ಯ ದೇವರಿಗೆ ನೈವೇದ್ಯವನ್ನು ಅರ್ಪಿಸುವ ಹಾಗೆ ಟಾಮ್ ಗೆ ನೈವೇದ್ಯವನ್ನು ಸಲ್ಲಿಸಲಾಗುತ್ತಿದೆ.