ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಗ್ರಾಮೀಣ ಮಟ್ಟದಲ್ಲಿ ವಿಧ್ಯಾಭ್ಯಾಸ ಮಾಡಿ ಇಂದು ಯು.ಪಿ.ಎಸ್.ಸಿ.ಯಲ್ಲಿ 462 ನೇ ರ್ಯಾಂಕ್ ಪಡೆದಿರುವ ರಾಹುಲ ಯರಂತೇಲಿ ಇವರನ್ನು ಇಣಚಗಲ್ಲ ಗ್ರಾಮದ ವಡ್ಡರ (ಭೋವಿ) ಸಮಾಜದವರು ಸನ್ಮಾನಿಸಿ ಗೌರವಿಸಿದರು.
ಈ ಸನ್ಮಾನ ಸಮಾರಂಭದಲ್ಲಿ ವಡ್ಡರ ಸಮಾಜದ ಮುಖಂಡ ಹಣಮಂತ ಭೈರವಾಡಗಿ ಅವರು ಮಾತನಾಡಿ, ಈಗ ರ್ಯಾಂಕ್ ಪಡೆದು ಸಾಧನೆ ಮಾಡಿರುವ ರಾಹುಲ ಯರಂತೇಲಿ ಇವರ ತಂದೆಯಾದ ಶ್ರೀ ಸಿ.ಬಿ ಯರಂತೇಲಿ ಇವರು ಇಣಚಗಲ್ಲ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಇಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮನೆ ಮಾಡಿ ಕರ್ತವ್ಯಕ್ಕೆ ಬರುವ ಶಿಕ್ಷರ ಸಂಖ್ಯಯೇ ಹೆಚ್ಚಿರುವಾಗ ಇವರು ತಮ್ಮ ಸೇವಾ ಅವಧಿಯಲ್ಲಿ ಇಣಚಗಲ್ಲ ಗ್ರಾಮದಲ್ಲಿಯೇ ಮನೆ ಮಾಡಿಕೊಂಡು ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ ಇದೇ ಊರ ಶಾಲೆಯಲ್ಲಿಯೇ ಇವರ ಮಗನಾದ ರಾಹುಲನೂ ಕೂಡ ಪೂರ್ವ ಪ್ರಾಥಮಿಕ ಶಾಲೆಯಲ್ಲಿಯೇ ಕಲಿತು ನಂತರ ನವೋದಯ ಶಾಲೆಗೆ ಆಯ್ಕೆಗೊಂಡು ಅಲ್ಲಿ ಕಲಿತು ಈಗ ಈ ಸಾಧನೆ ಮಾಡಿರುವುದಕ್ಕೆ ಇಡೀ ಗ್ರಾಮವೇ ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ವಡ್ಡರ (ಭೋವಿ) ಸಮಾಜದ ಹಿರಿಯ ಮುಖಂಡರಾದ ಪ್ರಕಾಶ ಎಲ್ ಭೈರವಾಡಗಿ, ದುರುಗಪ್ಪ ದೊಡಮನಿ, ರಾಜು ಭೈರವಾಡಗಿ,ನಾಗರಾಜ ಭೈರವಾಡಗಿ, ಕೃಷ್ಣ ಸೋಮನಾಳ, ಮುತ್ತು ಕವಡಿಮಟ್ಟಿ,ಆನಂದ ದೊಡಮನಿ,ಉದಯ ಭೈರವಾಡಗಿ, ಪ್ರಶಾಂತ ಭೈರವಾಡಗಿ, ಹಣಮಂತ ವಡ್ಡರ, ಕಾಶಪ್ಪ ಬನ್ನಟ್ಟಿ, ತಿಪ್ಪಣ್ಣ ಗೌಂಡಿ, ವಿಠಲ ತಾಳಿಕೋಟಿ, ಶ್ರೀಕಾಂತ ಹಂಚಲಿ, ಭಾಷೆ ಸಾಬ್ ನಾಯ್ಕೋಡಿ. ಸಂದೀಪ್ ವಡ್ಡರ. ಹರಿಕೃಷ್ಣ ಬಳ್ಳಾರಿ ಹಾಗೂ ಸೇರಿದಂತೆ ಭಾಗವಹಿಸಿದ್ದರು.