VOJ ನ್ಯೂಸ್ ಡೆಸ್ಕ್: ಉತ್ತರಾಖಂಡ್ನ ಸಿಎಂ ಆಗಿ ಬಿಜೆಪಿ ನಾಯಕ ಪುಷ್ಕರ್ ಸಿಂಗ್ ಧಾಮಿ ಇಂದು ಡೆಹ್ರಾಡೂನ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಮೂಲಕ ಧಾಮಿ ಎರಡನೇ ಬಾರಿಗೆ ಉತ್ತರಾಖಂಡ್ನಲ್ಲಿ ಸಿಎಂ ಗದ್ದುಗೆ ಏರಿದಂತಾಗಿದೆ. 2021 ರ ಜುಲೈ ತಿಂಗಳಲ್ಲಿ ಪುಷ್ಕರ್ ಸಿಂಗ್ ಉತ್ತರಾಖಂಡ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಧಾಮಿ ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಪ್ರಿ ಎದುರು ಖತಿಮಾ ಕ್ಷೇತ್ರದಲ್ಲಿ ಸೋತಿದ್ದರು.