5 ನೇ ದಿನಕ್ಕೆ ಕಾಲಿಟ್ಟ ಅಮರಣಾಂತ ಉಪವಾಸ ಸತ್ಯಾಗ್ರಹ
ಶಿವಕುಮಾರ್ ನಾಟಿಕಾರ್ ಅವರ ಆರೋಗ್ಯದಲ್ಲಿ ಏರುಪೇರು.
ಅಫಜಲಪುರ: ಪಟ್ಟಣದಲ್ಲಿ ಕಳೆದ 5 ದಿನಗಳಿಂದ ಶಿವಕುಮಾರ ನಾಟೀಕಾರ ಅವರು ಭೀಮಾ ನದಿಗೆ ನೀರು ಹರಿಸುವಂತೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರಿಂದ ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ.
ದಿನೆ – ದಿನೆ ಆರೊಗ್ಯದಲ್ಲಿ ಏರು-ಪೇರುಗಳಾಗುತ್ತಿವೆ
ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತಿದೆ ಏನಾದರೂ ಆಹಾರ ಸೇವನೆ ಮಾಡಬೇಕು ಅಥವಾ ಏನಾದರೂ ಧ್ರವ ಪದಾರ್ಥಗಳನ್ನಾದರೂ ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಆದರೂ ಸಹ ಶಿವಕುಮಾರ ನಾಟೀಕಾರ ಅವರು ಒಪ್ಪುತ್ತಿಲ್ಲ.
ನಿಶ್ಯಕ್ತಿಯಿಂದ ಎದ್ದು ಕುಳಿತು ಮಾತನಾಡಲೂ ಸಹ ತೊಂದರೆ ಆಗುತ್ತಿದೆ ಆದರೂ ಸಹ ಇನ್ನೂ ಅವರಲ್ಲಿ ಹೋರಾಟದ ಕಿಚ್ಚು ಆರಿಲ್ಲ ಪ್ರಾಣ ಹೋದರೂ ಸರಿ ನೀರು ಬಿಡುವವರೆಗೆ ಆಹಾರ ಸೇವಿಸಲ್ಲ ಎಂದು ಛಲದಿಂದ ಕುಳಿತಿದ್ದಾರೆ.
ಅವರ ಈ ಗಟ್ಟಿತನದ ಹೋರಾಟವನ್ನು ಕಂಡು ಇಡೀ ಅಫಜಲಪುರ ಪಟ್ಟಣದ ವ್ಯಾಪಾರಸ್ತರು, ಮುಖಂಡರುಗಳು ಬೆಂಬಲವಾಗಿ ನಿಂತಿದ್ದಾರೆ.
ಇದು ರೈತರೆಲ್ಲರಿಗೂ ಆತ್ಮಾವಲೋಕನ ಮಾಡಿ – ಕೊಳ್ಳಬೇಕಾದ ಸಮಯ ನೀರಿಲ್ಲದೆ ನಿಮ್ಮ ಬೆಳೆಗಳು ಹಾಳಾಗುತ್ತಿವೆ, ಎಷ್ಟು ದಿನ ಅಂತ ಸುಮ್ಮನೆ ಕೂಡುತ್ತೀರಿ? ಬನ್ನಿ ಇಲ್ಲೊಬ್ಬ ಶಿವಕುಮಾರ ನಾಟೀಕಾರ ನಿಮಗಾಗಿ ಉಪವಾಸ ಮಾಡುತ್ತಿದ್ದಾನೆ ಅವನಿಗೆ ಬೆಂಬಲವಾಗಿ ನಿಲ್ಲಿ ಎನ್ನುವುದು ನಮ್ಮ ಆಶಯವಾಗಿದೆ.
ವರದಿ : ಉಮೇಶ್ ಅಚಲೇರಿ, ಅಫಜಲಪುರ ತಾಲ್ಲೂಕು, ಕಲ್ಬುರ್ಗಿ ಜಿಲ್ಲೆ.