ಲಿಂಗಸೂಗೂರು: ಇಂದು ನಡೆದ ಮುದಗಲ್ ಪುರಸಭೆಯ ಅಧ್ಯಕ್ಷ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅಧ್ಯಕ್ಷ ಸ್ಥಾನದ ಗಾದೆ ಏರಲು ಭಾರಿ ಪೈಪೋಟಿಯೂ ನಡೆದಿತ್ತು.
ತಾಲೂಕಿನ ಮುದಗಲ್ ಪುರಸಭೆಯು 23 ಸದಸ್ಯರನ್ನು ಒಳಗೊಂಡಿದ್ದು, ಅದರಲ್ಲಿ 14 ಕಾಂಗ್ರೆಸ್ ಸದಸ್ಯರು, 08 ಜೆಡಿಎಸ್, ಒಬ್ಬರು ಬಿಜೆಪಿ ಸದಸ್ಯರಿದ್ದಾರೆ. ಈಗಾಗಲೇ 15 ತಿಂಗಳುಗಳ ಕಾಲ ಕಾಂಗ್ರೆಸ್ನ ಸದಸ್ಯೆ ಅಮೀನಾಬೇಗಂ ಬಾರಿಗಿಡ ಅಧ್ಯಕ್ಷರಾಗಿ ಮಂದುವರೆದಿದ್ದರು.
ಕಳೆದರೆಡು ತಿಂಗಳುಗಳಿಂದ ಪುರಸಭೆ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಈ ಹಿನ್ನಲೆಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ 3 ನೆ ವಾರ್ಡಿನ ಸದಸ್ಯರಾದ ಅಮೀನಾ ಬೇಗಂ ಗಂಡ ಸೈಯದ್ ಸಾಬ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಬಲರಾಮ ಕಟ್ಟಿಮನಿ, ಪೊಲೀಸ್ ಇಲಾಖೆ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಉಪಸ್ಥಿತರಿದ್ದರು.