ಸಂಗನಬಸಯ್ಯ ದಾನಯ್ಯ ಮಠಪತಿ ಕಾಣೆಯಾಗಿದ್ದಾರೆ..!
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಸಂಗನಬಸಯ್ಯ ದಾನಯ್ಯ ಮಠಪತಿ ವಯಾ 68 ಮಾರ್ಚ್ 18 ರಂದು, ತಿಪಟೂರಿಗೆ ಹೋಗಿ ಕೊಬ್ಬರಿ ವ್ಯಾಪಾರದ ಬಾಕಿ ಹಣ ತರುತ್ತೇನೆ ಎಂದು ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ವಿವರ : ಸಾದಕಪ್ಪು ಮೈ ಬಣ್ಣ, ಉದ್ದ ಮುಖ, ನೆಟ್ಟನೆ ಮೂಗು, ಬೆಳ್ಳನೆ ಕೂದಲು ಸಾಧಾ, ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ, ಮನೆಯಿಂದ ಹೋಗುವಾಗ ಬಿಳಿ ಪೈಜಾಮ,ಬಿಳಿ ನೆಹರು ಶರ್ಟ್ ಧರಿಸಿಕೊಂಡು ಹೋಗಿರುತ್ತಾರೆ. ಇವರ ಮಾಹಿತಿ ಸಿಕ್ಕಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಅವರ ಮೋ:9480804273 ಸಂಖೆಗೆ ಸಂಪರ್ಕಿಸಲು ತಿಳಿಸಲಾಗಿದೆ.



















