ಮೇ 7 ರಂದು ಮತದಾನ ಹಬ್ಬ, ಸಮಾಜದ ಒಳಿತಿಗಾಗಿ
ಪ್ರತಿಯೊಬ್ಬರೂ ಮತದಾನ ಮಾಡಿ : ಆನಂದ ರಿಷಿ
ಇಂಡಿ : ಸಮಾಜದ ಒಳಿತಿಗಾಗಿ, ಜಿಲ್ಲೆಯ, ದೇಶದ ಅಭಿವೃದ್ಧಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ಮೇ – 7 ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ರಿಷಿ ಹೇಳಿದರು.
ಶುಕ್ರವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾ ಅಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿರುವ ಮತದಾನ ಜಾಗೃತಿಯ ಕಾರ್ಯಕ್ರಮದಲ್ಲಿ ವಿವಿಧ ಬಣ್ಣ ಬಣ್ಣದ ರಂಗೋಲಿಯಲ್ಲಿ ಮೂಡಿರುವ ಮತದಾನ ಜಾಗೃತಿ ಚಿತ್ರಗಳನ್ನು ವಿಕ್ಷಿಸಿ, ಪಕ್ಷಿಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಮರದಲ್ಲಿ ನೇತಾಕಿ ಹಾಗೂ ಬಣ್ಣ ಬಣ್ಣದ ಹಿಲಿಯಂ ಬಲೂನ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಶೇ 100 ರಷ್ಟು ಮತದಾನವಾಗಿಸುವ ನಿಟ್ಟಿನಲ್ಲಿ, ವಿಶೇಷವಾಗಿ ನವ ಮತದಾರರು, ಮಹಿಳೆಯರು, ಮುಖ್ಯವಾಹಿನಿಯಿಂದ ದೂರವಿರುವ ಅಲೆಮಾರಿ ಜನಾಂಗದವರು, ದಿವ್ಯಾಂಗರು ಮತ್ತು ಹಿರಿಯ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಮತದಾನ ಮಾಡಿ ಪ್ರಜಾ ಪ್ರಭುತ್ವ ಗಟ್ಟಿಗೊಳಿಸಿ ಎಂದು ಹೇಳಿದರು.
ಇನ್ನೂ ಕಂದಾಯ ಇಲಾಖೆ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿದ ಅವರು, ನಿಮ್ಮ ಮನೆಯ ಒಂದು ಕಾರ್ಯಕ್ರಮದಲ್ಲಿ ಸುಮಾರು ದಿನಗಳ ಕಾಲ ತಯಾರಿ ಇಡೀ ಪಟ್ಟಣಕ್ಕೆ ಕರೆ ನೀಡಿದಾಗ ಯಾರೊಬ್ಬರೂ ಬರದೆ ಇದ್ದರೆ ನಿಮಗೆ ಅತ್ಯಂತ ನೋವು ಆಗುತ್ತೆ. ಅದರಂತೆ ಸುಮಾರು 6 ತಿಂಗಳ ಕಾಲ ನಿರಂತರವಾಗಿ ಜಿಲ್ಲಾ ಆಡಳಿತ ಹಾಗೂ ಚುನಾವಣೆ ಇಲಾಖೆ 2024 ರ ಲೋಕಸಭಾ ಚುನಾವಣೆ ತಯಾರಿ ನಡೆಸಿದೆ. ಅದಕ್ಕಾಗಿ ಪ್ರತಿಯೊಬ್ಬರನ್ನೂ ಪ್ರೇರೇಪಿಸಿ, ಜಾಗೃತಿಗೊಳಿಸಿ ಕಡ್ಡಾಯವಾಗಿ ಮತದಾನ ಮಾಡಲು ಮನವರಿಕೆ ಮಾಡಿ ಮತದಾನದ ಪ್ರತಿಶತ ಹೆಚ್ಚಿಸಿ ಪ್ರಜಾಪ್ರಭುತ್ವ ಹಬ್ಬ ಆಚರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಮಂಜುಳಾ ನಾಯಿಕ, ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಎಸ್ ಬಿ ಮಾತನಾಡಿದರು.
ತದನಂತರ ತಾಲ್ಲೂಕು ಆಡಳಿತದ ಸೌಧದಿಂದ ರಥಯಾತ್ರೆ ಪ್ರಾರಂಭಿಸಿ, ರಸ್ತೆಯ ಉದ್ದಗಲಕ್ಕೂ ಎಸ್ ಬಿ ಎಮ್ ಸಾಂಪ್ರದಾಯಿಕ ಗೊಂಬೆಗಳ ಮೆರವಣಿಗೆಯ ಕುಣಿತ, 4 ನೂರು ಮೀಟರ್ ಉದ್ದದ ಮತದಾನ ಜಾಗೃತ ದ್ವಜದೊಂದಿಗೆ ಬಸವೇಶ್ವರ ವೃತ್, ಅಂಬೇಡ್ಕರ್ ವೃತ್ , ಮಹಾವೀರ ವೃತ್ ಹಾಗೂ ನಗರ ಹೃದಯಭಾಗದ ಮಹಾತ್ಮಾ ಗಾಂಧಿಜಿ ವೃತ್, ಶಾಂತೇಶ್ವರ ದೇವಸ್ಥಾನದ ಮುಂಬಾಗದಲ್ಲಿ ನಡೆದು ಪಟ್ಟಣದ ಪ್ರಮುಖ ಬಿದಿ, ರಸ್ತೆಯಲ್ಲಿ ಜಾಥಾ ಮಾಡಲಾಯಿತು. ಆ ನಂತರ
ಪೋಲಿಸ್ ಮೈದಾನಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣದ ಎಲ್ಲರಿಗೂ ಸಿಇಒ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್ ಎಸ್ ಪಾಟೀಲ, ಹೆಸ್ಕಾಂ ಇಲಾಖೆ ಅಧಿಕಾರಿ ಎಸ್ ಆರ್ ಮೆಡೆದಾರ, ಕ್ಷೇತ್ರ ಸಮನ್ವಯ ಅಧಿಕಾರಿ ನಡಗಡ್ಡಿ, ರಾಯಭಾರಿ ರಾಜೇಶ ಪವಾರ , ಸಿಡಿಪಿಒ ಗುತ್ತರಗಿಮಠ ಇನ್ನೂ ಅನೇಕ ತಾಲೂಕು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಕೆ ಅಮ್ಮಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ವಿವಿಧ ಸ್ವಸಹಾಯ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಖಾತ್ರಿ ಸಂಜಯ ಕಡಗೇಕರ್ ಸ್ವಾಗತಿಸಿದರು. ಪಿಡಿಒ ಬಸವರಾಜ ಬಬಲಾದ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜೆ ಇಂಡಿ ವಂದಿಸಿದರು.