ಬಿಲ್ಡಿಂಗ್ ಮೇಲೆ ಕೆಲಸ ಮಾಡುತ್ತಿದ್ದ ಮೇಸ್ತ್ರಿಗೆ ವಿದ್ಯುತ್ ಶಾಕ್..! ಸ್ಥಳದಲ್ಲೇ ಮೇಸ್ತ್ರಿ ಸಾವು..!
ಇಂಡಿ : ತಾಲ್ಲೂಕಿನ ಬುಯ್ಯಾರ ಗ್ರಾಮದಲ್ಲಿ ದುರಂತ ನಡೆದಿದೆ. 44 ವರ್ಷದ ಅಬ್ದುಲ್ ಸತ್ತಾರ ಮೃತ ಮೇಸ್ತ್ರಿ.
ಬಿಲ್ಡಿಂಗ್ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.



















