ಕಾರ್ಮಿಕರ ಕಚೇರಿಗೆ ಬೀಗ ಆಚರಣೆಯಾಗದ ಕಾರ್ಮಿಕ ದಿನ : ಕ್ರಮಕ್ಕೆ ಆಗ್ರಹ
ಇಂಡಿ: ಕಾರ್ಮಿಕರು ಹಾಗೂ ಕಾರ್ಮಿಕ ವರ್ಗವನ್ನು ದೇಶದ ಪ್ರಬಲ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ದೇಶದ ಅಭಿವೃದ್ಧಿಯಲ್ಲಿ ಇವರ ಪಾತ್ರ ಬಹಳ ಮಹತ್ವದ್ದು. ಕಾರ್ಮಿಕ ವರ್ಗದವರು ದೇಶದ ಅಭಿವೃದ್ಧಿಗೆ ಬೇರುಗಳಂತೆ ಭದ್ರವಾಗಿರುವವರು. ಆದರೆ ಇಡೀ ದೇಶ ಮತ್ತು ರಾಜ್ಯದಾದ್ಯಂತ ಮೇ – 1 ರಂದು ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಮಾಡುತ್ತೀರುವ ಸಂದರ್ಭದಲ್ಲಿ, ತಾಲ್ಲೂಕಿನ ಆಡಳಿತ ಸೌಧದಲ್ಲಿರುವ
ಕಾರ್ಮಿಕರ ಇಲಾಖೆಗೆ ಬೀಗ ಹಾಕಿದ್ದು, ಆಚರಣೆ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಭವಿಷ್ಯದ ಜಿಲ್ಲಾ ಕೇಂದ್ರ ಎಂದು ಬಿಂಬಿತಗೊಂಡಿರುವ ಇಂಡಿ ತಾಲ್ಲೂಕಿನ ಆಡಳಿತ ಸೌಧದಲ್ಲಿ ಇರುವ ಕಾರ್ಮಿಕ ಕಛೇರಿ ನೌಕರರು ನಿರಂತರ ಸೇವೆ ನೀಡಿದರೂ ಉಪಯೋಗಬಾರದಂತಾಗಿದೆ. ಏಕೆಂದರೆ ಇಂದು ಕಾರ್ಮಿಕರಿಗೆ ಅತ್ಯಂತ ಮೌಲ್ಯಯುತ್ ದಿನ. ಅವರು ತಮ್ಮ ನೋವು ನಲಿವು, ಬೇಕು-ಬೇಡಿಕೆ ಭಾವನೆ ಹಂಚಿಕೊಳ್ಳುವ ದಿನ
ಆದರೆ ಕಾರ್ಮಿಕ ಕಛೇರಿ ಬೀಗ ಹಾಕಿದ್ದರಿಂದ ತಾಲೂಕಿನ ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ.
ಯಾವುದೇ ದೇಶಕ್ಕೆ ಕಾರ್ಮಿಕರು ಹಾಗೂ ಕಾರ್ಮಿಕ ವರ್ಗದವರು ಬೆನ್ನೆಲುಬಾಗಿರುವುದು ಬಹಳ ಮುಖ್ಯ.
ಒಂದು ದೇಶ ಹಾಗೂ ರಾಜ್ಯ ತನ್ನದೇ ಆದ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಆರ್ಥಿಕತೆಯಿಂದ ನಿರ್ಮಿಸಲ್ಪಡುವಲ್ಲಿ ಕಾರ್ಮಿಕರ ಪಾತ್ರ ಬಹಳ ಮುಖ್ಯವಾಗಿದೆ. ಆ ಕಾರಣಕ್ಕೆ ಕಾರ್ಮಿಕರ ಬಗ್ಗೆ ಸದಾ ದೇಶ ಹಾಗೂ ಜನರು ಗಮನ ಹರಿಸಬೇಕು. ಅವರ ಯೋಗಕ್ಷೇಮದ ನಿಗಾ ವಹಿಸಬೇಕು. ಅವರ ಸಮಸ್ಯೆಗಳಿಗೆ ಕಿವಿಯಾಗಬೇಕು ಎಂದು ಮೇ 1 ರಂದು ಕಾರ್ಮಿಕ ದಿನಾಚರಣೆ ಆಚರಣೆ ಮಾಡಲಾಗುತ್ತದೆ.
ಈ ಮೊದಲು ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯ ದಿನ ಕಟ್ಟಡ ಕಾರ್ಮಿಕರು ಎತ್ತಿನ ಬಂಡೆಯ ಕೆಲಸ ಮಾಡುವ ಕಾರ್ಮಿಕರು, ಪುರಸಭೆಯ ಕಾರ್ಮಿಕರು, ಅನೇಕ ಕಾರ್ಮಿಕ ವರ್ಗ ಸೇರಿ ಎತ್ತಿನ ಬಂಡೆಯೊಂದಿಗೆ ಮೆರವಣೆಗೆ ತೆಗೆದು ಕಾರ್ಮಿಕರ ದಿನಾಚರಣೆ ಆಚರಿಸುತ್ತಿದ್ದು ಈ ಬಾರಿ ಇದ್ಯಾವದು ಆಗಿಲ್ಲ.
ತಾಲೂಕಿನಲ್ಲಿರುವ ಬೇರೆ ಬೇರೆ ಇಲಾಖೆಯಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರನ್ನು ಗೌರವಿಸಬೇಕಾಗಿತ್ತು. ಅಲ್ಲದೆ ಕಾರ್ಮಿಕರಿಗೆ ಆರೋಗ್ಯ ಕುರಿತು ಕಿಟ್ ಹಂಚುತ್ತಿದ್ದರು. ಗೌಂಡಿಗಳಿಗೆ ಮತ್ತು ಇತರೆ ಕಾರ್ಮಿಕರಿಗೆ ಅವರಿಗೆ ಬೇಕಾಗುವ ಸಾಮಾನು ಕಿಟ್ ರೂಪದಲ್ಲಿ ವಿತರಣೆ ಮಾಡುತ್ತಿದ್ದರು. ಆದರೂ ಅದಾವುದೆ ನಡೆಯದೇ ಕಚೇರಿಗೆ ಬೀಗ ಹಾಕಿದ್ದಾರೆ.
ಈ ಕುರಿತು ಹಲವಾರು ಕಾರ್ಮಿಕರು ಇಲಾಖೆಗೆ ಬಂದು ತಮ್ಮ ಅಸಂತೋಷ ವ್ಯಕ್ತ ಪಡಿಸಿದ್ದಾರೆ. ಮತ್ತು ಕನಿಷ್ಠ ಪಕ್ಷ ಇಲಾಖೆ ತೆಗೆದು ಫೋಟೋಗೆ ಹಾರ ಹಾಕಿ ಸರಳ ರೂಪದಲ್ಲಾದರೂ ಆಚರಣೆ ಮಾಡಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರು.
ಓರ್ವ ಕಾರ್ಮಿಕ ಪ್ರತಿ ರಾಷ್ಟ್ರದ ದೊಡ್ಡ ಆಸ್ತಿ ಮತ್ತು ನಿರ್ಮಾತೃ. ನಮ್ಮ ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ವರ್ಗದ ಕೊಡುಗೆ ಅನ್ಯನ್ಯ, ಅವರ ಕಾರ್ಯ ಶ್ಲಾಘನೀಯ. ಆದರೆ ಇಂದು ತಾಲ್ಲೂಕು ಆಡಳಿತ ಸೌಧದಲ್ಲಿರುವ ಕಾರ್ಮಿಕ ಕಛೇರಿ ಬೀಗ ಹಾಕಿದ್ದು ಮತ್ತು ಆಚರಣೆ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿ. ಆ ಶ್ರಮಿಕರ ನೋವು ನಲಿವು ಜೊತೆಗೆ ಅವರ ಭಾವನೆಗಳನ್ನು ಹಂಚಿಕೊಳ್ಳುವ ಅದೃಷ್ಟ ತಪ್ಪಿದ್ದು ಖಂಡನೀಯ.
ಚಂದ್ರಶೇಖರ ಹೊಸಮನಿ, ಸಾಮಾಜಿಕ ಕಾರ್ಯಕರ್ತರು ಇಂಡಿ
ನನ್ನ ಮೈಯಲ್ಲಿ ಹುಷಾರಿಲ್ಲ, ಹೀಗಾಗಿ ಈ ಬಾರಿ ಕಾರ್ಮಿಕ ದಿನಾಚರಣೆ ಮಾಡಿಲ್ಲ.
ದತ್ತು ದೇವರಮನಿ ಕಾರ್ಮಿಕ ಅಧಿಕಾರಿಗಳು ಇಂಡಿ
ನಾನು ಕಾರ್ಮಿಕ ಇಲಾಖೆಯಿಂದ ವರದಿ ತರಿಸಿಕೊಂಡು ಕಾರ್ಮಿಕ ಇಲಾಖೆಯ ಮುಖ್ಯಸ್ಥರಿಗೂ ಮತ್ತು ಮಾನ್ಯ ಜಿಲ್ಲಾಧಿಕಾರಿಗಳಿಗೂ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸುತ್ತೇನೆ.
ಅನುರಾಧಾ ವಸ್ತ್ರದ ಕಂದಾಯ ಉಪವಿಬಾಗಾಧಿಕಾರಿಗಳು ಇಂಡಿ
ಇಂಡಿ ಪಟ್ಟಣದ ಆಡಳಿತಸೌಧ ದಲ್ಲಿರುವ ಕಾರ್ಮಿಕ ಇಲಾಖೆಗೆ ಕೀಲಿ ಹಾಕಿರುವದು. ಕಾರ್ಮಿಕರ ಅಕ್ರೋಶಕ್ಕೆ ಗುರಿಯಾಗಿರುವದು