ಎರಡು ರಾಷ್ಟ್ರೀಯ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ನಿರ್ಲಕ್ಷ್ಯ… ಬಿ.ಡಿ. ಪಾಟೀಲ..
ಮಹಮ್ಮದ್ ಪಟೇಲ್ ಜೆಡಿಎಸ್ ರೈತಘಟಕ ತಾಲೂಕು ಅಧ್ಯಕ್ಷರಾಗಿ ನೇಮಕ..
ಇಂಡಿ : ಎರಡು ರಾಷ್ಟ್ರೀಯ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ಕಾಳಜಿ ತೋರದಿರುವುದು ನೋವಿನ ಸಂಗತಿ ಎಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.
ಶನಿವಾರ, ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ರೈತ ಘಟಕದ ತಾಲ್ಲೂಕು ಅಧ್ಯಕ್ಷರನ್ನಾಗಿ ಹಿರೇಮಸಳಿ ಗ್ರಾಮದ ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಮಹ್ಮದ ಪಟೇಲರನ್ನು ಆಯ್ಕೆ ಮಾಡಿ ಆದೇಶ ಪ್ರತಿ ನೀಡಿ ಮಾತನಾಡಿದರು.
ನೀರಾವರಿ, ಸಾಲಮನ್ನಾ, ರಸಗೂಬ್ಬರದಂತಹ ರೈತ ನೀರಿಕ್ಷೀತ ಬಹು ಪ್ರಮುಖ ಕಾರ್ಯಕ್ರಮಗಳು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಅಧಿಕಾರಾವಧಿಯಲ್ಲಿ ಸಾಕಷ್ಟು ಮಾಡಿದ್ದಾರೆ. ಅಂತಹ ನಾಯಕರ ಕೈ ಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾತನಾಡಿದರು.
ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಆರ್ ಕೆ ಪಾಟೀಲ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಖಬಿಲ ಇಜಾಜ್ ಪಟೇಲ್, ಅಲ್ಪಸಂಖ್ಯಾತ ತಾಲೂಕಾ ಅಧ್ಯಕ್ಷ ಮಜಿದ್ ಸೌದಾಗರ, ಮಹಿಬೂಬ ಬೇವನೂರ, ಸೋಮನಿಂಗ ಅವಜಿ, ರಾಜು ಮುಲ್ಲಾ, ಇರ್ಫಾನ್ ಅಗರಖೇಡ, ಫಜಲು ಮುಲ್ಲಾ, ಮಾಳು ಮ್ಯಾಕೇರಿ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು