ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದ ಇಂಡಿಯ ಸುಚಿತ್ರಾ ಬಿರಾದಾರ
ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್. ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣ ಜ್ಯ ಹಾಗೂ ಎಮ್.ಪಿ. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಬಿಕಾಂ ವಿಭಾಗದ ವಿದ್ಯಾರ್ಥಿನಿ ಸುಚಿತ್ರಾ ಬಿರಾದಾರ ಅವರಿಗೆ ಕರ್ನಾಟಕ ಸರ್ಕಾರವು ಜಿಲ್ಲಾಡಳಿತ ಸಹಯೋಗದೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ೧೫೫ ನೇ ಜಯಂತಿ ಅಂಗವಾಗಿ ಅ.೩ ರಂದು ಹಮ್ಮಿಕೊಂಡಿದ ವಿಜಯಪುರ ಜಿಲ್ಲೆಯ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಸ್ನಾತಕ, ಸ್ನಾತಕೋತ್ತರ ವಿಭಾಗದಲ್ಲಿ ಎರಡನೆಯ ಸ್ಥಾನ ಪಡೆದಿರುತ್ತಾಳೆ. ಕಾರಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಎಲ್ಲ ಬೋಧಕ, ಬೋಧಕೇತರರ ವತಿಯಿಂದ ಅಭಿನಂದಿಸಿದ್ದಾರೆ.