ಇಂಡಿ | ಬೈಕ್ ಅಪಘಾತದಲ್ಲಿ ಗ್ರಾಮ ಆಡಳಿತಾಧಿಕಾರಿ ಸಾವು..!
ಇಂಡಿ : ಬೈಕ್ ಅಪಘಾತದಲ್ಲಿ ಗ್ರಾಮ ಆಡಳಿತಾಧಿಕಾರಿ ಸಾವನ್ನಪ್ಪಿರುವ ಘಟನೆ ಪಟ್ಟಣ ಸಿಂದಗಿ ರಸ್ತೆಯ ದೇಶಪಾಂಡೆ ತಾಂಡಾದ ಹತ್ತೀರ ನಡೆದಿದೆ.
ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ಚಂದ್ರಕಾಂತ ಸೂರ್ಯವಂಶಿ ವಯಾ (36) ಎಂಬುವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರು ಸುಮಾರು 14 ವರ್ಷದಿಂದ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ್ ತಾಲ್ಲೂಕಿನ ಹಿರೇರೂಗಿ ಗ್ರಾಮ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಆದರೆ ನಿನ್ನೆ ಸಾಯಂಕಾಲ ಮನೆಯಲ್ಲಿ …. ಎಂಬ ಮಗಳ ಜನ್ಮ ದಿನ ಇರುವುದರಿಂದ ಪಟ್ಟಣಕ್ಕೆ ತೆರಳಿ ಕೆಕ್ ತರುವ ಬಗ್ಗೆ ಮನೆಯಲ್ಲಿ ಹೇಳಿ ಹೋಗಿದ್ದರು. ಆದರೆ 7 :30 ಕ್ಕೆ ಮರಳಿ ಸಾಲೋಟಗಿ ಗ್ರಾಮಕ್ಕೆ ಬರುವಾಗ ಬೈಕ್ ಸ್ಕೀಡಾಗಿ ಬಿದ್ದು, ತಲೆಗೆ ಹಾಗೂ ಮುಖಕ್ಕೆ ಬಾರಿ ಪೆಟ್ಟು ಬಿದ್ದು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ತಾಲ್ಲೂಕು ಸಾರ್ವಜನಿಕ ಸರಕಾರಿ ಅಸ್ಪತ್ರಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮ ಆಡಳಿತ ಅಧಿಕಾರಿ ಸಾವನ್ನಪ್ಪಿದ್ದಾರೆ.