ಇಂಡಿ ಬರಗಾಲ ಘೋಷಣೆ ವಿಚಾರಕ್ಕೆ ಶಾಸಕ ಪಾಟೀಲ ಸ್ಪಷ್ಟನೆ..!
ನಮಸ್ಕಾರ… ನೀವು ನೋಡುತ್ತಿರುವುದು VOICE OFJANATAA.
ವಿಜಯಪುರ: ಇಂಡಿ–ಚಡಚಣ ಬರಗಾಲ ಘೋಷಣೆ ಆಗದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ, ಇದೀಗ ತಮ್ಮ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾದರೂ, ಇಂಡಿ–ಚಡಚಣ ಕೈಬಿಡಲಾಗಿತ್ತು. ಹೀಗಾಗಿ ಮತಕ್ಷೇತ್ರದ ಜನರ ಪರವಾಗಿ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದಾರೆ.
ಇದೀಗ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದೆ ಎಂದಿದ್ದಾರೆ.
ಇನ್ನು, ರಾಜೀನಾಮೆ ವಿಚಾರವಾಗಿ ಟೀಕೆಗಳಿಗೆ ಪ್ರತಿಕ್ರಿಯಿಸದ ಶಾಸಕ ಪಾಟೀಲ, 40 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೇನೆ, ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದ ಜಿಗಜಿಣಗಿ ಅವರ “ರಾಜೀನಾಮೆ ನಾಟಕ” ಹೇಳಿಕೆಗೂ ಪ್ರತಿಕ್ರಿಯಿಸದ ಪಾಟೀಲ,
“ಯಾವುದೇ ಟೀಕೆಗಳಿಗೆ ಉತ್ತರ ನೀಡುವುದಿಲ್ಲ” ಎಂದಿದ್ದಾರೆ.



















