ಇಂಡಿ ನಗರದಲ್ಲಿ ಮೆಡಿಕಲ್ ಚಾಲೂ ಇದ್ದು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೆಡಿಕಲ್ ಮಾಲೀಕರು ಬಂದ್‌ಗೆ ಬೆಂಬಲ ನೀಡಿದ್ದಾರೆ
ಇಂಡಿ: ಆನ್‌ಲೈನ್ ಔಷಧ ವ್ಯಾಪಾರದಿಂದ ಸಾಂಪ್ರದಾಯಿಕ ಮೆಡಿಕಲ್ ಶಾಪ್‌ಗಳಿಗೆ ಆಗುವ ತೊಂದರೆ ನಿವಾರಿಸುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರಸಾಯನ ಹಾಗೂ ರೋಗ ನಿರೋಧಕಗಳ ಸಂಘ ಮೇ ೨೦ ರಂದು ರಾಷ್ಟçವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು ಇಂಡಿ ನಗರದಲ್ಲಿ ಎಂದಿನAತೆ ಮೆಡಿಕಲ್ ಚಾಲೂ ಇದ್ದು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೆಡಿಕಲ್ ಮಾಲೀಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಂಡಿ ತಾಲೂಕಿನ ಸಾಂಪ್ರದಾಯಿಕ ಮೆಡಿಕಲ್ ಶಾಪ್‌ಗಳ ಮಾಲೀಕರು ನೈತಿಕ ಬೆಂಬಲ ಸೂಚಿಸಿದ್ದು, ಮೆಡಿಕಲ್ ಶಾಪ್ ಸೇವೆ ಎಂದಿನAತೆ ಚಾಲೂ ಇರಿಸಿ ಕೈಗೆ ಕಪ್ಪು ಪಟ್ಟಿ ಧರಸಿದ್ದರು. ಹೀಗಾಗಿ ಜನರಿಗೆ ಎಂದಿನAತೆ ಮಡಿಕಲ್‌ನಿಂದ ತಮಗೆಬೇಕಾದ ಔಷಧಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ಇಂಡಿ: ಇಂಡಿ ನಗರದ ಕೆಈಬಿ ಹತ್ತಿರ ಮೆಡಿಕಲ್ ಚಾಲೂ ಇದ್ದು ಕಪ್ಪು ಬಟ್ಟೆ ಕಟ್ಟಿಕೊಂಡು ಬಂದ್‌ಗೆ ಬೆಂಬಲ ಸೂಚಿಸಿರುವುದು.


















