ಜಾತಿ ಗಣತಿಯ ನಮೂನೆಯ ಕಲಂ 61ರಲ್ಲಿ ‘ಮಾದಿಗ ಸಮುದಾಯ’ ಎಂದು ನಮೂದಿಸಬೇಕುಂದು ಕರೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ;ಜಾತಿ ಗಣತಿಯ ನಮೂನೆಯ ಕಲಂ 61ರಲ್ಲಿ ‘ಮಾದಿಗ ಸಮುದಾಯ’ ಎಂದು ನಮೂದಿಸಬೇಕು ಎಂದು ಮಾದಿಗ ದಂಡೋರ ಸಮಿತಿಯ ತಾಲೂಕ ಅಧ್ಯಕ್ಷ ತಿಪ್ಪಣ್ಣ ದೂಡಮನಿ ಹಾಗೂ ಮುಖಂಡ ಭೀಮರಾವ ಹುಲ್ಲೂರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳ ಪೈಕಿ ಒಳಮಿಸಲಾತಿ ವರ್ಗೀಕರಣದ ಸಮೀಕ್ಷೆಗೆ ಬರುವ ಅಧಿಕಾರಿಗಳ ಬಳಿ ಮಾದಿಗ ಎಂದು ನಮೂದಿಸಬೇಕು
ಸರ್ಕಾರದ ಪ್ರತಿನಿಧಿಗಳು ಜಾತಿ ಸಮೀಕ್ಷೆಗೆ ಬರುತ್ತಿದ್ದು ತಪ್ಪದೆ ಆಯಾ ಗ್ರಾಮದಲ್ಲಿರುವ ವಿದ್ಯಾರ್ಥಿಗಳು, ಯುವಕರು, ಸಂಘಟನೆ ಮುಖಂಡರು ಗ್ರಾಮದ ಯಾವುದೇ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ಭಗವಂತ ಕಬಾಡೆ, ನೀಲಪ್ಪ ನಾಲತವಾಡ, ಸಾಬಣ್ಣ ಬಸರಕೋಡ, ರವಿ ಬಸರಕೋಡ, ಮರೆಪ್ಪ ಕುಂಟೋಜಿ, ಪರಶುರಾಮ ಬಸರಕೋಡ, ಗುರು ಚಲಮಿ, ಬಸವರಾಜ ಕೋಳೂರ, ಮಂಜುನಾಥ ತಂಗಡಗಿ, ಕಾಶಿನಾಥ ಬಸರಕೋಡ ಭಾಗವಹಿಸಿದ್ದರು.