ವಿಜಯಪುರ : ಹೆರಿಗೆಗೆ ಹೊರಟಿದ್ದ ಗರ್ಭಿಣಿಗೆ ಆಸ್ಪತ್ರೆಯ ಎದುರಲ್ಲೆ ಹೆರಿಗೆ ಆಗಿರುವ ಘಟನೆ ವಿಜಯಪುರ ತಾಲ್ಲೂಕಿನ ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಶುಕ್ರವಾರ ನಡೆದಿದೆ. ವಿಜಯಪುರ ತಾಲ್ಲೂಕಿನ ಚವ್ಹಾಣ ದೊಡ್ಡಿಯ ಗರ್ಭಿಣಿ ಅನು ಬೇವು ಕೊಳೆಕರಗೆ ಹೆರಿಗೆ ಆಗಿದೆ. ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತರುವಾಗ ಹೆರಿಗೆ ಆಗಿದ್ದು, ಆದ್ರೇ, ಹೆರಿಗೆಯಾದ್ರೂ ಅರ್ಧ ಗಂಟೆ ನವಜಾತ ಶಿಶುವಿನ ಹುರಿ ಕಟ್ ಮಾಡದೇ ಇದ್ದಿದ್ದರಿಂದ ಬಾಣಂತಿ ನರಳಾಟ ಅನುಭವಿಸಿದ್ದಾಳೆ. ತದನಂತರ ಅರ್ಧ ಗಂಟೆ ಬಿಟ್ಟು ಬಂದ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಇದೀಗ್ ತಾಯಿ ಮಗು ಆರೋಗ್ಯವಾಗಿ ಇದ್ದಾರೆ.