ವಿಜಯಪುರ : ಹೋಳಿ ಹಬ್ಬದ ಬಳಿಕೆ ಬಾವಿಯಲ್ಲಿ ಈಜಲು ಹೋಗಿ ಈಜಲು ಬಾರದೆ ಯುವಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಬುಧವಾರ ನಡೆದಿದೆ. 24 ವರ್ಷದ ಸುನೀಲ ಕಳ್ಳಿಮನಿ ಮೃತಪಟ್ಟಿರುವ ದುರ್ದೈವಿ. ಇನ್ನೂ ಹೋಳಿ ಹಬ್ಬದಲ್ಲಿ ಬಣ್ಣದ ಆಟದ ಬಳಿಕ ಬಾವಿಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸವನಬಾಗೇಬಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.