ಕೃಷಿ ಮೇಳಗಳು, ಜಾತ್ರೆಗಳು, ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಕರೆ ತರುವ ಮಹತ್ವದ ಕಾರ್ಯಕ್ರಮ
ಇಂಡಿ : ಕೃಷಿ ಮೇಳ, ಜಾತ್ರೆಗಳು ರೈತರಿಗೆ ಅತ್ಯಂತ ಉಪಯೋಗಕ್ಕಾರಿ, ಅಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಶನಿವಾರ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತೋಟಗಾರಿಕೆ ಹಾಗೂ ಎಸ್ ಡಬ್ಲ್ಯೂ ಎ ಆರ್ ಡಿ ಎಸ್ ಸಂಸ್ಥೆ ಸಹಯೋಗದೊಂದಿಗೆ “ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಲಿಂಬೆ ಬೆಳೆಗಾರರಿಗೆ ಕೃಷಿ ಮೇಳ ಪ್ರವಾಸ ವಾಹನಗಳಿಗೆ ಹಸಿರು ನಿಶಾನೆ ತೋರಸಿ ಚಾಲನೆ ನೀಡಿದರು.
ಕೃಷಿಕರು ಸುಸ್ಥಿರ ಮತ್ತು ಸಾವಯವ ಬೇಸಾಯದ ಬಗ್ಗೆ ಮಾಹಿತಿ ಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಕೃಷಿ ವೈಜ್ಞಾನಿಕ ಪದ್ದತಿಗಳ ಬಗ್ಗೆ ಅರ್ಥಮಾಡಿಕೊಳ್ಳಲು ಅತ್ಯಂತ ಸೂಕ್ತ ವೇದಿಕೆ ಕೃಷಿಮೇಳ ಹಾಗೂ ಕೃಷಿ ಜಾತ್ರೆ ಎಂದು ಹೇಳಿದರು. ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅಳವಡಿಕೊಂಡಾಗ ಮಾತ್ರ ರೈತರು ಒಳ್ಳೆಯ ಫಸಲು ಪಡೆಯಲು ಸಾಧ್ಯೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇನ್ನೂ ಇದೆ ಸಂದರ್ಭದಲ್ಲಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ಧೇಶಕ ಎಚ್ ಎಸ್ ಪಾಟೀಲ ಮಾತನಾಡಿದ ಅವರು, ಕೃಷಿ ಮೇಳದಲ್ಲಿ ಪಾಲ್ಗೊಂಡರೆ, ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡಲು ಸೂಕ್ತ ವೇದಿಕೆಯಾಗುತ್ತೆದೆ. ಹೈನುಗಾರಿಕೆ, ರೇಷ್ಮೆ ಕೃಷಿ, ಕೃಷಿ ಬೆಳೆಯ ಮೌಲ್ಯವರ್ಧನೆ, ಸಾವಯವ ಕೃಷಿ, ಸುಸ್ಥಿರ ಕೃಷಿ ಹಾಗೂ ಔಷಧಿ ಮತ್ತು ಸುಗಂಧ ದ್ರವ್ಯ ಸಸ್ಯಗಳ ಬಗ್ಗೆ ಅದಲ್ಲದೇ ಅನೇಕ ರೀತಿಯ ಮಾಹಿತಿ ಮತ್ತು ಅರಿವು ದೊರೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಡವಲಗಾ ಮತ್ತು ರೂಗಿ ಗ್ರಾಮದ ಸುಮಾರು 1 ನೂರಕ್ಕೂ ಹೆಚ್ಚಿನ ರೈತರು ಉಪಸ್ಥಿತರಿದ್ದರು.