ವಿಜಯಪುರ : ಮಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಸಲ್ಲಿಕೆ ಅವಧಿ ಸೋಮವಾರ ಮುಕ್ತಾಯವಾಗಿದೆ. 35 ಸದಸ್ಯ ಬಲದ ಮಹಾನಗರ ಪಾಲಿಕೆಗೆ ಒಟ್ಟು 358 ನಾಮಪತ್ರಗಳ ಸಲ್ಲಿಕೆ ಆಗಿದೆ. ಬಿಜೆಪಿಯಿಂದ 93, ಕಾಂಗ್ರೆಸ್ ನಿಂದ 65, ಜೆಡಿಎಸ್ ನಿಂದ 25, ಆಮ್ ಆದ್ಮಿ ಪಾರ್ಟಿಯಿಂದ 19, ಎಐಎಂಐಎಂನಿಂದ 4, ಕೆಆರ್ ಎಸ್ ಪಕ್ಷದಿಂದ 3, ಜನತಾ ಪಾರ್ಟಿಯಿಂದ 3, ಎಸ್ ಡಿ ಪಿ ಐ ಪಕ್ಷದಿಂದ 3, ಸಮಾಜವಾದಿ ಪಾರ್ಟಿಯಿಂದ 2 ಹಾಗೂ ಬಿಎಸ್ಪಿಯಿಂದ 1 ನಾಮಪತ್ರಗಳ ಸಲ್ಲಿಕೆ ಆಗಿದೆ. ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್ನ ಕೆಲ ಅಭ್ಯರ್ಥಿಗಳು ತಲಾ ಎರಡು ಹಾಗೂ ಮೂರು ನಾಮಪತ್ರ ಮಾಡಿದ್ದಾರೆ. ಇನ್ನೂ
ನಾಮಪತ್ರ ಪರಿಶೀಲನೆ ಬಳಿಕ ನಿರ್ದಿಷ್ಟ ನಾಮಪತ್ರಗಳ ಸಂಖ್ಯೆ ತಿಳಿದು ಬರಲಿದೆ.