ದೇವದುರ್ಗ: ದೇವದುರ್ಗ ತಾಲೂಕು ವ್ಯಾಪ್ತಿಯ ಗಬ್ಬೂರು ಗ್ರಾಮಪಂಚಾಯಿತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಯಲ್ಲಿ ಗ್ರಾಮಸಭೆಯನ್ನು ಆಯೋಜಿಸಗಿತ್ತು. ಗ್ರಾಮ ಸಭೆಯ ಅಧ್ಯಕ್ಷತೆ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆಗೆ ಚಾಲನೆ ನೀಡಿ ಗ್ರಾಮಸ್ಥರ ಸಮಕ್ಷಮದಲ್ಲಿ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಸರಿ ಸುಮಾರು 80 ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದ್ದು ಅರ್ಜಿಗಳನ್ನು ಪರಿಶೀಲಿಸಿ 40 ಫಲನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಮಾತನಾಡಿದ ಅರಣ್ಯಧಿಕಾರಿಗಳು ಇದೆ ಮಾರ್ಚ್ 20 ರ ಒಳಗಾಗಿ ಫಲನುಭವಿಗಳಿಗೆ ಆಯ್ಕೆ ಮಾಡಿ ಫಲನುಭವಿಗಳಿಗೆ ತಿಳಿಸಲಾಗುವುದೆಂದು ಹೇಳಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನರಸಮ್ಮ, ಪಂಚಾಯತ್ ಅಭಿರುದ್ದಿ ಅಧಿಕಾರಿಗಳಾದ ಶಿವುಕುಮಾರ್, ಪಂಚಾಯತ್ ಕಾರ್ಯದರ್ಶಿಗಳಾದ ಮೈನುದ್ದಿನ್, ಹಾಗೂ ಸರ್ವಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.