ಅಫಜಲಪುರ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಾವಿತ್ರಿ ಕೃಷ್ಣ ಅವರು, ರಾಜ್ಯಮಟ್ಟದ ೨೦೨೨ ನೇ ಸಾಲಿನ ‘ಉತ್ತಮ ಗ್ರಂಥಪಾಲಕ’ ಗ್ರಂಥಾಲಯ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಗ್ರಂಥಾಲಯ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಯನ್ನು ಗಮನಿಸಿ, ಕರ್ನಾಟಕ ಸರಕಾರವು ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೂಲಕ ನೀಡುತ್ತಿರುವ ರಾಜ್ಯಮಟ್ಟದ ೨೦೨೨ ನೇ ಸಾಲಿನ ‘ಉತ್ತಮ ಗ್ರಂಥಪಾಲಕ’ ಗ್ರಂಥಾಲಯ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಡಾ. ಸಾವಿತ್ರಿ ಕೃಷ್ಣ ಅವರು ಉತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ.
ವರದಿ : ಉಮೇಶ್ ಅಚಲೇರಿ, ಅಪ್ಜಲಪುರ/ಕಲ್ಬುರ್ಗಿ