ಇಂಡಿ : ಅಕ್ರಮವಾಗಿ ಗೋವಾ ಮದ್ಯ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬಸವರಾಜ ಆಕಳವಾಡಿ ಬಂಧಿತ ಆರೋಪಿ. ಇನ್ನೂ ಆಕ್ರಮವಾಗಿ 18 ಲೀಟರ ಗೋವಾ ರಾಜ್ಯದ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿಗೈದು ಮದ್ಯ ಜಪ್ತಿಗೈದಿದ್ದಾರೆ. ಅಬಕಾರಿ ಪೊಲೀಸ ಪರೀನಾ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಈ ಕುರಿತು ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.