ಕಬ್ಬಿನ ಬಿಲ್‌ಗಾಗಿ ರೈತರ ಪ್ರತಿಭಟನೆ
ವಿಜಯಪುರ: ರೈತರು ಬೀಳಗಿ ಬಾಡಗಂಡಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಆರು ತಿಂಗಳು ಗತಿಸಿದರು ರೈತರಿಗೆ ಒಂದು ರೂಪಾಯಿ ಕೂಡ ಕಬ್ಬಿನ ಬಿಲ್ ಪಾವತಿಸಿರುವುದಿಲ್ಲ ಇದರಿಂದ ಕೃಷಿ ಚಟುವಟಿಕೆಗಳಿಗೆ ಹಣ ಇಲ್ಲದೇ ಕಬ್ಬು ಬೆಳೆದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಬೀಳಗಿ ಶುಗರ್ಸ್ ಲಿಮಿಟೆಡ್ ಬಾಡಗಂಡಿ ಇವರ ಕಂಪನಿಯ ಆಡಳಿತ ಕಚೇರಿಯ ಮುಂದೆ ಅಖಂಡ ಕರ್ನಾಟಕ ರೈತ ಸಂಘ ದ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಹಳ್ಳಿಯ ರೈತರು ಧರಣಿ ಸತ್ಯಾಗ್ರಹ ಹೂಡಿದ್ದಾರೆ.
ಈ ಸಂದರ್ಭದಲ್ಲಿ ಅರವಿದ ಕುಲಕರ್ಣಿ ಮಾತನಾಡಿ, ಆರು ತಿಂಗಳು ಗತಿಸಿದರು ಕಬ್ಬು ಪೂರೈಸಿದ ರೈತರಿಗೆ ಹಣ ನೀಡದೆ ಇರುವುದು ರೈತ ವಿರೋಧಿ ವಾಗಿದ್ದು 48 ಗಂಟೆಗಳಲ್ಲಿ
ಮೂಲ ಹಣದೊಂದಿಗೆ ಬಡ್ಡಿ ಬಡ್ಡಿ ಸೇರಿಸಿ ರೈತರ ಖಾತೆಗೆ ಕಬ್ಬಿನ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ಆಡಳಿತ ಮಂಡಳಿ ಕಚೇರಿಗೆ ಬೀಗ ಜಡಿದು ಧರಣ ನಡೆಸಲಾಗುವುದೆಂದು ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. ಸತ್ಯಗ್ರಹ ಅರವಿಂದ್
ರೈತ ಸಂಘದ ಚನ್ನಬಸಪ್ಪ ಸಿಂದೂರ, ಪರುಶುರಾಮ ಸುಂಟ್ಯಾನ, ಕಲ್ಲಪ್ಪ ಸಜ್ಜನ, ಶರಣಪ್ಪ ಹಿಪ್ಪರಗಿ, ಸಂಗನಬಸಪ್ಪ ದಳವಾಯಿ, ರಾಚನಗೌಡ ಪಾಟೀಲ, ಯಲಗೂರದಪ್ಪ ದಳವಾಯಿ, ಮುತ್ತುರಾಜ ಹೂಗಾರ, ಶಿವಪ್ಪ ಮುರಾಳ, ಗುರಪಾದ ಹಿರೇಮಠ, ಸುರೇಶ ಸುಂಟ್ಯಾನ, ಮಲ್ಲಿಕಾರ್ಜುನ ಗವಿಮಠ, ಮಾನಪ್ಪ ಬಡಿಗೇರ, ಅಶೋಕ ಶಿರಸಂಗಿ, ಹಣಮಂತ ಮುರಾಳ, ಚಂದ್ರಾಮ ಕೊಲಕಾರ, ಮಹೇಶ ನಾಟೀಕಾರ ಮತ್ತಿತ್ತರು ಇದ್ದರು.



















