ಸ್ಪೋಟಕ ಶಬ್ದ : ಭೂಮಿ ನಡುಗಿದ ಅನುಭವ
ಇಂಡಿ : ಇಂಡಿಯಲ್ಲಿ ಇಂದು ಬೆಳಗ್ಗೆ ೧೦.೫೨ ಗಂಟೆಗೆ ಒಮ್ಮಿಂದೊಮ್ಮೆಲೆ ಸ್ಪೋಟಕ ಶಬ್ದ ಕೇಳಿಸಿದೆ. ಮತ್ತು ಭೂಮಿ ನಡುಗಿದ ಅನುಭವವಾಗಿದೆ.
ಇಂಡಿ ಪಟ್ಟಣದ ಸೇರಿದಂತೆ ತಡವಲಗಾ,ಹೊರ್ತಿ,ಇಂಗಳಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈ ಅನುಭವವಾಗಿದೆ.
ಪಟ್ಟಣದ ಜನತೆ ಭಯಭೀತರಾಗಿದ್ದರು. ಇದು ಭೂಕಂಪ ಇರಬಹುದೆಂದು ತಿಳಿದಿದ್ದರು.
ಪರಮಪೂಜ್ಯ ಶ್ರೀ ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು ಪತ್ರಿಕೆ ಜೊತೆ ಮತ್ತು ಹಲವಾರು ಕಡೆ ಮಾತನಾಡಿದರು.
ಈ ಕುರಿತು ಪತ್ರಿಕೆದೊಂದಿಗೆ ಮಾತನಾಡಿದ ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಗಣ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕಿಸಿದ್ದು ಗುಲಬರ್ಗಾ ಜಿಲ್ಲೆಯಲ್ಲಿ ಭೂಮಿಯ ಕೆಳ ಪದರಿನಲ್ಲಿ ಸುಣ್ಣದ ಪ್ರಮಾಣ ಹೆಚ್ಚಾಗಿದ್ದು ಅದರಲ್ಲಿ ಒಂದು ಪದರು ಜೇವರಗಿಯಿಂದ ಇಂಡಿಯ ವರೆಗೆ ಬಂದಿದೆ. ಆ ಪದರು ಮಳೆಯಾದಾಗ ಈ ರೀತಿ ಸಪ್ಪಳು ಕೇಳಿಸುತ್ತದೆ ಎಂದು ತಿಳಿಸಿದ್ದಾರೆ ಎಂದರು.



















