ಆದರ್ಶ ವಿದ್ಯಾಲಯಕ್ಕೆ ಖಾಲಿ ಸೀಟಿಗೆ ಪರೀಕ್ಷೆ
ಇಂಡಿ : ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ೨೦೨೪-೨೫ ನೇ ಸಾಲಿನ ೭,೮ ಮತ್ತು ೯ನೇ ತರಗತಿಯ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಬರ್ತಿ ಮಾಡಿಕೊಳ್ಳಲು ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಬೆಂಗಳೂರು ಇವರು ನಿರ್ದೇಶನ ನೀಡಿರುತ್ತಾರೆ.
ರೋಸ್ಟರ ಆಧಾರದ ಮೇಲೆ ೭ ನೇ ತರಗತಿಯ ೨೨, ೮ ನೇ ತರಗತಿಯ ೦೮ ಮತ್ತು ೯ ನೇ ತರಗತಿಯ ೮ ಸೀಟುಗಳು ಖಾಲಿ ಇವೆ. ಆಸಕ್ತರು ದಿನಾಂಕ ೨೦ ಜೂನ ರಿಂದ ೨೬ ರ ವರೆಗೆ ಸರಕಾರಿ ಆದರ್ಶ ವಿದ್ಯಾಲಯ ಇಂಡಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಲು ತಿಳಿಸಿದ್ದಾರೆ.
ಪರೀಕ್ಷೆ ೨೯ ರಂದು ಬೆಳಗ್ಗೆ ೧೦.೩೦ ರಿಂದ ೧ ಗಂಟೆಯ ವರೆಗೆ ನಡೆಯುತ್ತದೆ ಎಂದು ಮುಖ್ಯೋಪಾದ್ಯಾಯ ಎಸ್.ಜಿ. ಬನಸೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.