ಇಂಡಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧರಿಣಿ ಇಂಡಿ ತಾಲೂಕಿನ ಚಿಕ್ಕಬೇನೂರ ಗ್ರಾಮಸ್ಥರು ಧರಣಿ ಸತ್ಯಾಗ್ರಹ ನಡೆಸಿದರು. ಚಿಕ್ಕಬೇನೂರ 4ನೇ ದಲಿತ ವಾರ್ಡ್ ನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ವಾರ್ಡ್‌ನಲ್ಲಿ ವಿದ್ಯುತ್ ಟಿ.ಸಿ ಬೇರೆಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೇ, ಮನೆಗಳ ಹಂಚಿಕೆಯಲ್ಲಿ ಅವ್ಯವಹಾರವಾಗಿದ್ದು, ಸದಸ್ಯರುಗಳು ತಮ್ಮ ಮನಸ್ಸಿಗೆ ಬಂದಂತೆ ಮನೆಗಳ ಆಯ್ಕೆ ಮಾಡಿದ್ದಾರೆ. ಇದರಿಂದ ನಿಗ೯ತಿಕರಿಗೆ, ಕಡುಬಡವರಿಗೆ, ಅಸಹಾಯಕರಿಗೆ ಅನ್ಯಾಯವಾಗಿದೆ. ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ತನಿಖೆಗೆ ಆಗ್ರಹಿಸಿದರು. ದಲಿತ ಮುಖಂಡರಾದ ರವಿಚಂದ್ರ ಪಾದಗಟ್ಟಿ, ಸುರೇಶ ಕಟ್ಟಿಮನಿ,ಪರಸುರಾಮ ವಠಾರ,ವಿಲಾಸ ಸೊಲಾಪೂರ, ಸಚೀನ ಮೇಲಿನಮನಿ, ರಾಜಕುಮಾರ ಇಂಗಳಗಿ, ಪ್ರಭಾಕರ ತಳಕೇರಿ, ಮೈಬೂಬ ಮುಲ್ಲಾ, ಪರಸುರಾಮ ಕಟ್ಟಿಮನಿ, ಇತರರು ಉಪಸ್ಥಿತರಿದ್ದರು.