ಅಫಜಲಪುರ: ಅಕ್ರಮ ಮರಳು ಮಾಫಿಯಾ, ಪಿಸ್ತೂಲ್ ಮಾರಾಟ, ಗಾಂಜಾ ಹಾಗೂ ಅಕ್ರಮ ಮಧ್ಯ ಮಾರಾಟ ಸೇರಿದಂತೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ರೌಡಿಶಿಟರಗಳಿಗೆ ತಾಕೀತು ಮಾಡಿದರು.
ಅಫಜಲಪುರ ಠಾಣೆಯಲ್ಲಿ ರೌಡಿ ಶೀಟರಗಳ ಪರೇಡ್ ನಡೆಸಿ ತಾಕೀತು ಮಾಡಿದ ಅವರು ತಾವು ಊರು ಬಿಡುವಾಗ ತಮ್ಮ ವ್ಯಾಪ್ತಿಯ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೆ ನಮ್ಮ ಪೋಲಿಸರು ಕರೆದಾಗ ಠಾಣೆಗೆ ಬರಬೇಕು. ಪರೇಡನಲ್ಲಿ ಗೈರಾದವರು ಎಂಥಾ ಪ್ರಭಾವಿಗಳಿದ್ದರೂ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ವಯಸ್ಸಾದವರ ಒಳ್ಳೆಯ ನಡತೆ ಗುರುತಿಸಿ ಪರಿಶೀಲಿಸಿ ರೌಡಿ ಶೀಟರನಿಂದ ತೆಗೆದು ಹಾಕಲು ಕ್ರಮಕೈಗೊಳ್ಳಲಾಗುವುದು. ಉತ್ತಮ ಜೀವನ ನಡೆಸಿ ಸಮಾಜದಲ್ಲಿ ಬದುಕು ನಡೆಸಿ ಇಲ್ಲದಿದ್ದರೆ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಪಿಐ ಜಗದೇವಪ್ಪಾ ಪಾಳಾ ಮಾತನಾಡಿ ಅಫಜಲಪುರ, ರೇವೂರ, ದೇವಲ ಗಾಣಗಾಪೂರ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ರೌಡಿ ಶೀಟರಗಳು ಯಾವುದೇ ಕಾರಣಕ್ಕೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಾರದು. ನಿಮ್ಮ ಮೇಲೆ ಇಲಾಖೆ ನಿರಂತರ ನಿಗಾ ಇಟ್ಟಿರುತ್ತದೆ ಎಂದು ತಿಳಿಸಿದರು.
ತಾಲೂಕಿನ ಒಟ್ಟು 373 ಜನ ರೌಡಿ ಶೀಟರ್ ಗಳಲ್ಲಿ 234 ಜನ ರೌಡಿಶಿಟರಗಳು ಪರೇಡನಲ್ಲಿ ಭಾಗಿಯಾಗಿದ್ದರು.
ಪಿಎಸ್ಐ ಗಳಾದ ಸುರೇಶ ಕುಮಾರ ಚವ್ಹಾಣ, ರಾಜಶೇಖರ ರಾಠೋಡ, ಗಂಗಮ್ಮ ಜಿನ್ನಿಕೇರಿ, ಶ್ರೀದೇವಿ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.