ಐತಿಹಾಸಿಕ ತಾಜಬಾವಡಿ ಬಗ್ಗೆ ಜಿಲ್ಲಾಧಿಕಾರಿ ಮಾತು ಏನು ಗೊತ್ತಾ..?
ವಿಜಯಪುರ : ಐತಿಹಾಸಿಕ ತಾಜಬಾವಡಿ ರಕ್ಷಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ತಾಜಬಾವಡಿ ಸುತ್ತಮುತ್ತಲಿನ ಕಡೆಗೆ ಅತಿಕ್ರಮಣ ಮಾಡಿಕೊಂಡಿದ್ದ ಮನೆಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ. ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನೇತೃತ್ವದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ತಾಜಬಾವಡಿ ನಿವಾಸಿಗಳು ಸಾತ್ ನೀಡಿದ್ದಾರೆ ಎಂದರು. ತಾಜಬಾವಡಿ ನೀರು ಹಾಳಾಗದಂತೆ ಎಲ್ಲರು ಕಾಪಾಡಬೇಕು. ಹೀಗೇ ಐತಿಹಾಸಿಕ ಗೋಳಗುಮ್ಮಟ್ ಪ್ರಸಿದ್ಧ ಪಡೆದುಕೊಂಡಿದೆ. ಅದೇ ತರಹ ತಾಜಬಾವಡಿಗೂ ಒತ್ತು ನೀಡಲಾಗುತ್ತದೆ ಎಂದು ಡಿಸಿ ಭೂಬಾಲನ್ ಹೇಳಿದರು.


















